
ಕಾಣಿಯೂರು: ಬೆಂಗಡ್ಕ ನಿವಾಸಿಯಾಗಿರುವ ಅಭಿಷೇಕ್ ಎಂಬ ಯುವಕ ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಡಬ ತಾಲೂಕು ಕಾಣಿಯೂರು ಗ್ರಾಮದ ಬೆಂಗಡ್ಕ ಎಂಬಲ್ಲಿನ ನಿವಾಸಿ ಜತ್ತಪ್ಪ ಗೌಡ ಎಂಬವರ ಮಗ ಅಭಿಷೇಕ್ ನಿಂತಿಕಲ್ಲು ಪರಿವಾರ ಪಂಚಲಿಂಗೇಶ್ವರ ಐಟಿಐ ಕಾಲೇಜಿನಲ್ಲಿ ಐಟಿಐ ವಿದ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ Altgreen ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿಯೇ ವಾಸವಿದ್ದ. ಎರಡು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದನು.

ಇತ್ತೀಚಿಗೆ ನ.17ರಂದು ಬೆಂಗಳೂರಿಂದ ಮನೆಗೆ ಬಂದು ನ.20 ರಂದು ಸಂಜೆ 5ಗಂಟೆಗೆ ಮನೆಯಿಂದ ಬೆಂಗಳೂರಿಗೆ ಹೋಗುತ್ತೇನೆಂದು ತಿಳಿಸಿ ಹೋಗಿರುತ್ತಾನೆ. ನ.21ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಬೆಂಗಳೂರು ತಲುಪಿ ವಾಸವಿರುವ ರೂಮ್‌ನಲ್ಲಿ ಇರುವುದಾಗಿ ತಿಳಿಸಿರುತ್ತಾರೆ. ಬಳಿಕ ಪ್ರತಿ ದಿನ ರಾತ್ರಿ ಮನೆಗೆ ಪೋನ್ ಮಾಡುತ್ತಿದ್ದವನು ದಿನಾಂಕ ನ.27ರಂದು ರಾತ್ರಿ ಫೋನ್ ಮಾಡಿರುವುದಿಲ್ಲ ಅದರಂತೆ ದಿನಾಂಕ ನ.28ರಂದು ಆತನ ಮೊಬೈಲ್ ನಂಬರ್‌ಗೆ ಕರೆಮಾಡಿದಲ್ಲಿ ಸ್ವಿಚ್ ಆಫ್ ಆಗಿದ್ದು ಬಳಿಕ ಪದೇ ಪದೇ ಪೋನ್ ಮಾಡಿದಾಗಲೂ ಸ್ವಿಚ್ ಆಫ್ ಎಂದು ಬರುತ್ತಿದ್ದುದರಿಂದ ಆತನ ಸ್ನೇಹಿತ ಅಭಿಷೇಕ ಎಂಬಾತನಿಗೆ ದೂರವಾಣಿ ಕರೆ ಮಾಡಿದಲ್ಲಿ ಅಭಿಷೇಕ ನಮ್ಮರೂಂ ನಿಂದ 4 ದಿನಗಳ ಹಿಂದೆ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾನೆ ಎಂದು ತಿಳಿಸಿದಂತೆ ಅಭಿಷೇಕ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ವಿಚಾರಿಸಿದಲ್ಲಿ ಅಭಿಷೇಕ ನಮ್ಮ ಕಂಪನಿಯಲ್ಲಿ ಕೆಲಸ ಬಿಟ್ಟು ಸುಮಾರು 6 ತಿಂಗಳು ಆಗಿರುತ್ತದೆ ಎಂದು ತಿಳಿಸಿರುತ್ತಾರೆ.
ಅಭಿಷೇಕನ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿದಾಗ ಆತ ಅಲ್ಲಿಗೂ ಹೋಗದೇ ಕಾಣೆಯಾಗಿರುತ್ತಾನೆ. ಅಭಿಷೇಕನನ್ನು ದಿನಾಂಕ ನ.20 ರಂದು ಸಂಜೆ 05:00 ಗಂಟೆಗೆ ನಮ್ಮ ಮನೆಯಿಂದ ಹೊರಡುವ ವೇಳೆ ಕೊನೆಯ ಬಾರಿ ಮುಖ ನೋಡಿದ್ದು ಆ ಬಳಿಕ ನೋಡಿರುವುದಿಲ್ಲ. ಆದುದರಿಂದ ಕಾಣೆಯಾದ ಮಗ ಅಭಿಷೇಕನನ್ನ ಪತ್ತೆ ಹಚ್ಚಿ ಕೊಡಬೇಕಾಗಿ ದೂರಿನಲ್ಲಿ ಆತನ ಪೋಷಕರು ವಿನಂತಿಸಿಕೊಂಡಿದ್ದಾರೆ.
