ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಮೇಲೆ ಪೋಲಿಸರಿಂದ ದೌರ್ಜನ್ಯ : ಘಟನೆ ಖಂಡಿಸಿ ಸುಳ್ಯದಲ್ಲಿ ವಕೀಲರಿಂದ ಪ್ರತಿಭಟನೆ .

ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಮೇಲೆ ಪೋಲಿಸರಿಂದ ದೌರ್ಜನ್ಯ : ಘಟನೆ ಖಂಡಿಸಿ ಸುಳ್ಯದಲ್ಲಿ ವಕೀಲರಿಂದ ಪ್ರತಿಭಟನೆ .

ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಮೇಲೆ ಪೋಲಿಸ್ ದೌರ್ಜನ್್ಯ ನಡೆದು ಘಟನೆ ಖಂಡಿದಿ ವಕೀಲರು ಪ್ರತಿಭಟನೆ ನಡೆಸಿದ್ದರು, ಬಳಿಕ ಆರ ಮಂದಿ ಪೋಲಿಸರು ಅಮಾನತು ಆಗಿದ್ದರು ನಂತರದ ಬೆಳವಣಿಗೆಯಲ್ಲಿ ಪೋಲಿಸರು ಹಾಗೂ ಅವರ ಕುಟುಂಬಸ್ಥರಿಂದ ಪ್ರತಿಭಟನೆ ನಡೆದಿತ್ತು ಘಟನೆ ತೀವ್ರ ಸುದ್ದಿಯಲ್ಲಿರುವಾಗಲೇ ಸುಳ್ಯದಲ್ಲೂ ವಕೀಲರು ಪ್ರೀತಂ ಪರ , ಹಾಗೂ ಪೋಲಿಸ್ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಸುಳ್ಯ ನ್ಯಾಯಾಲಯದ ಎದುರು ಬೃಹತ್ ಪತ್ರಿಭಟನೆ ನಡೆಸಿದ ವಕೀಲರುಗಳು ಘೋಷಣೆಯನ್ನು ಕೂಗಿದರು ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ., ಸಂಘದ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ ಪೋಲೀಸರ ನಡೆಯನ್ನು ಖಂಡಿಸಿದರು. ಕಾರ್ಯದರ್ಶಿ ವಿಜಯಕುಮಾರ್ ಮುಳುಗಾಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಜಗದೀಶ್ , ಸಂಘದ ಪದಾಧಿಕಾರಿಗಳಾದ ಅಬೂಬಕ್ಕರ್, ಸುಕುಮಾರ ಕೋಡ್ತುಗುಳಿ, ನಳಿನ್ ಕುಮಾರ್ ಕೋಡ್ತುಗುಳಿ, ರವೀಂದ್ರನಾಥ ರೈ, ಚಂಪಾ ವಿ., ಕೇಶವ ಭೀಮಗುಳಿ, ಸಂದೀಪ್ ವಳಲಂಬೆ, ಕೃಷ್ಣ ಪ್ರಸಾದ್ ದೋಳ, ಸತೀಶ್ ಕುಂಭಕ್ಕೋಡು, ಭಾಸ್ಕರ್ ರಾವ್, ರಾಮಕೃಷ್ಣ ಅಮೈ, ದೇವಿಪ್ರಸಾದ್ ಆಳ್ವ, ಸಂದೀಪ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ