
ಸುಳ್ಯ : ಶಾಲಾ ಪ್ರವಾಸದ ಬಸ್ ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಪೆರಾಜೆಯಲ್ಲಿ ನ.೩೦ ರಂದು ವರದಿಯಾಗಿದೆ. ಕೇರಳದಿಂದ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ ಗಳ ಪೈಕಿ ಒಂದು ಬಸ್ ಏಕಾ ಏಕಿ ಬ್ರೇಕ್ ಹಿಡಿದ ಪರಿಣಾಮ ಹಿಂದಿನಿಂದ ಬಂದ ಮತ್ತೊಂದು ಬಸ್ ಮುಂದಿನ ಬಸ್ ಗೆ ಡಿಕ್ಕಿಯಾಗಿ ಎರಡೂ ಬಸ್ ಗಳಿಗೆ ಹಾನಿ ಸಂಭವಿಸಿದೆ.



ಸುಳ್ಯ ಕಡೆಯಿಂದ ತೆರಳುತ್ತಿದ್ದ ಕಾರೊಂದು ಅಡ್ಡರಸ್ತೆಗೆ ತೆರಳುವ ಸಂದರ್ಭ ಬಸ್ ಚಾಲಕ ಬ್ರೇಕ್ ಹಿಡಿದಿದ್ದಾನೆ ಇದೇ ಕಾರಣಕ್ಕೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಘಟನೆಯಲ್ಲಿ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.