
ಬೆಂಗಳೂರಿನಲ್ಲಿ ನಡೆಯುತ್ತಿರುವ ತುಳುನಾಡ ಕ್ರೀಡೆ ಕಂಬಳಕ್ಕೆ ರಾಜ್ಯದ ನಾನಾ ಕಡೆಗಳಿಂದ ಓಟದ ಕೋಣಗಳನ್ನು ಕೊಂಡೊಯ್ಯಲಾಗುತ್ತಿದ್ದು ಸುಳ್ಯದ ಕೃಷಿಕರ ಕೋಣವೂ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಅದರಂತೆ ಸುಳ್ಯದ ಕಾಂತಮಂಗಲದ ಜಗದೀಶ್ ರಾವ್ ಮಾಲಕತ್ವದ ಓಟದ ಕೋಣಗಳನ್ನು ಬೆಂಗಳೂರು ಕಂಬಳಕ್ಕೆ ಕರೆದೊಯ್ಯಲಾಗುತ್ತಿದ್ದು ಇದೇ ಸಂದರ್ಭದಲ್ಲಿ ವಿವಿಧ ಸಮಿತಿಗಳ ಪದಾದಿಕಾರಿಗಳು ಕೋಣಗಳ ಗೆಲುವಿಗೆ ಪ್ರಾರ್ಥಿಸಿ ಬೀಳ್ಕೊಡಲಾಯ್ತು.
ಈ ಸಂದರ್ಭದಲ್ಲಿ ಗೋಕುಲ್ ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಜಗದೀಶ್ ರಾವ್ ಕಾಂತಮಂಗಲ ಎಂಬಿ ಸದಾಶಿವ ,ಸತೀಶ್ ಎಂ.ಕೆ, ಶಾಫಿ ಕುತ್ತಮೊಟ್ಟೆ, ಶಶಿಧರ ಎಂ.ಜೆ, ದಿನೇಶ್ ಸರಸ್ವತಿ ಮಹಲ್, ಮಧುಸೂದನ ಬೂಡು, ಸುಮಂತ್ ಪೈಚಾರ್, ರಜಾಕ್, ಜಬ್ಬಾರ್, ಹರಿಶ್ಚಂದ್ರ ಪಂಡಿತ್, ರಾಜು ಪಂಡಿತ್, ಮಂಜುನಾಥ ಬಳ್ಳಾರಿ, ಸುರೇಶ್ ಪಂಡಿತ್, ಪದ್ಮನಾಭ ಆರ್ಭಡ್ಕ, ದೀಪಕ್ ಕಾಯರ್ತೋಡಿ, ಗಣೇಶ್ ನಾಗಪಟ್ಟಣ ಮೊದಲಾದವರಿದ್ದರು.



