

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಪಂದ್ಯಾಟದ ಎರಡನೇ ದಿನದ ಮಹಿಳೆಯರ ಎರಡನೇ ಕಬಡ್ಡಿ ಪಂದ್ಯಾಟದಲ್ಲಿ ನ್ಯಾಷನಲ್ ಬೆಂಗಳೂರು ಮಹಿಳಾ ತಂಡ ಮತ್ತು ಪಾಂಡೀಚೇರಿ ತಂಡದ ನಡುವೆ ತೀವ್ರ ಪೈಪೋಟಿ ನಡೆಯಿತಾದರು ಬೆಂಗಳೂರು ಮಹಿಳಾ ತಂಡದ ಸಂಘಟಿತ ಆಟಕ್ಕೆ ಪಾಂಡಿಚೇರಿ ತಲಬಾಗಬೇಕಾಯಿತು, ಬೆಂಗಳೂರು ತಂಡದ ಬಲಿಷ್ಟ ಆಟಗಾರ್ತಿ ಲಕ್ಷ್ಮಿ ದಾಳಿಯನ್ನು ಎದುರಿಸುವಲ್ಲಿ ಪಾಂಡಿಚೇರಿ ತಂಡ ವಿಫಲವಾಯಿತು ಅಂತಿಮವಾಗಿ 34 – 18 .ಅಂಕದೊಂದಿಗೆ ಬೆಂಗಳೂರು ತಂಡ ವಿಜಯಿಯಾಗಿ ಅಂಕಪಟ್ಟಿಯಲ್ಲಿ ಮುನ್ನುಗ್ಗಿತು. ಪಾಂಡೀಚೇರಿ ತಂಡದ ಆಟಗಾರ್ತಿಯರು ಗಾಯಗೊಂಡು ಬೆಂಗಳೂರು ತಂಡಕ್ಕೆ ಸುಲಭ ತುತ್ತಾದರು.



