

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಯೋಜನೆ ಹಾಗೂ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಇಂದಿನಿಂದ ಮೂರು ದಿನಗಳು ಬಹಳ ಅದ್ದೂರಿಯಾ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಜಿಲ್ಲೆಯ ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಲಿದೆ 12 ಪುರುಷರ ತಂಡ ಹಾಗೂ 4 ಮಹಿಳಾ ತಂಡ ಸೇರಿದಂತೆ ಒಟ್ಟು 16 ರಾಷ್ಟ್ರ ಮಟ್ಟದ ತಂಡಗಳು ಸೆಣೆಸಾಡಲಿದ್ದು , ಇಂಡೋರ್ ಸ್ಟೇಡಿಯಂ ಕೆಲಸ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು ಪ್ರೋ ಕಬಡ್ಡಿ ಕ್ರೀಡಾಂಗಣದ ರೀತಿಯಲ್ಲಿಯೇ ಸಜ್ಜುಗೊಂಡಿದೆ 4000 ಮಂದಿ ಕುಳಿತು ನೋಡಬಲ್ಲ ಬೃಹತ್ ಗ್ಯಾಲರಿ .


ನಿರ್ಮಾಣಗೊಂಡಿದ್ದು ಹೊರಾಂಗಣದ ಸುತ್ತಲು ಝಗ ಮಗಿಸುವ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ರಥಬೀದಿಯನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದ್ದು, ದೀಪಾವಳಿ ಹಬ್ಬದಲ್ಲಿ ಮಿಂದೆದ್ದ ಸುಳ್ಯ ಹಾಗೂ ಕರಾವಳಿ ಜನತೆಗೆ , ಸುಳ್ಯದ ಕಬ್ಬಡ್ಡಿ ಹಬ್ಬ ಸಡಗರವನ್ನು ಇಮ್ಮಡಿಗೊಳಿಸಲಿದೆ. ಈಗಾಗಲೇ ಟಿಕೆಟ್ ಕೌಂಟರ್ ತೆರೆದಿದ್ದು ಆಸಕ್ತರು ಕೂಡಲೇ ಟಿಕೆಟ್ ಪಡೆದು ಸೀಟು ಕಾಯ್ದಿರಿಸಿಕೊಳ್ಳಬಹುದು.


