ಉಜಿರೆಯಲ್ಲಿ ನಡೆದು ಹೋಗುತ್ತಿದ್ದ ಬಾಲಕಿಗೆ ಬೈಕ್‌ ಢಿಕ್ಕಿವಿದ್ಯಾರ್ಥಿನಿ ಮೃತ್ಯು.

ಉಜಿರೆಯಲ್ಲಿ ನಡೆದು ಹೋಗುತ್ತಿದ್ದ ಬಾಲಕಿಗೆ ಬೈಕ್‌ ಢಿಕ್ಕಿವಿದ್ಯಾರ್ಥಿನಿ ಮೃತ್ಯು.

ಬೆಳ್ತಂಗಡಿ: ಬೈಕ್ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಉಜಿರೆ ಸಮೀಪದ ಬದನಾಜೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಸ್ಥಳೀಯ ನಿವಾಸಿ ಅಶೋಕ್ ಮತ್ತು ಜಯಶ್ರೀ ಅವರ ಪುತ್ರಿ ಮೂರನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ಎಂದು ಗುರುತಿಸಲಾಗಿದೆ.
ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುವ ವೇಳೆ ರಸ್ತೆ ದಾಟುವಾಗ ಬೈಕ್ ಢಿಕ್ಕಿ ಹೊಡೆದಿತ್ತು.
ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರ ವಿಕಾಸ್ ವಿರುದ್ಧ ದೂರು ದಾಖಲಾಗಿದೆ

ರಾಜ್ಯ