
ಭಾರತ ಸರ್ಕಾರ ಅಯೋಜಿಸುವ ರಾಷ್ಟ್ರೀಯ ಮಟ್ಟದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ನೆಹರು ಯುವ ಕೇಂದ್ರ ಮಂಗಳೂರು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಶ್ರವಣ್ ಕೊಡ್ತುಗುಳಿ ಇವರು ರಾಷ್ಟ್ರೀಯ ಮಟ್ಟದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಯುವ ಚಾಂಪಿಯನ್ ಆಗಿ ಭಾಗವಹಿಸಲಿದ್ದಾರೆ.ದೇಶದ ಎಲ್ಲಾ ಭಾಗಗಳಿಂದ ಯುವ ಜನರು ದೆಹಲಿಯಲ್ಲಿ ಅಕ್ಟೋಬರ್ 30 ಮತ್ತು 31 ನೇ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವಜನರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಲಿದ್ದಾರೆ.
ಇವರು ಸುಳ್ಯ ತಾಲ್ಲೂಕು ಅಮರಮುಡ್ನೂರು ಗ್ರಾಮದ ಪೈಲಾರು ನಾರಾಯಣ ಕೊಡ್ತುಗುಳಿ ಮತ್ತು ಕುಸುಮಾವತಿ ಕೊಡ್ತುಗುಳಿ ಇವರ ಪುತ್ರ.ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ನಿರ್ದೇಶಕರು.


