ಪೈಂಬೆಚ್ಚಾ ಲು ಸರ್ಕಾರಿ ಶಾಲೆ ಕಚೇರಿಯಲ್ಲಿರುವ ಸಾಮಗ್ರಿಗಳು ಹಾನಿ:ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯ ಅಕ್ರೋಶ: ಪೋಲಿಸ್ ದೂರು.

ಪೈಂಬೆಚ್ಚಾ ಲು ಸರ್ಕಾರಿ ಶಾಲೆ ಕಚೇರಿಯಲ್ಲಿರುವ ಸಾಮಗ್ರಿಗಳು ಹಾನಿ:ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯ ಅಕ್ರೋಶ: ಪೋಲಿಸ್ ದೂರು.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳು ಕಚೇರಿಯ ಕಿಡಿಕಿ ಮೂಲಕ ಸಲಾಕೆ ಇನ್ನಿತರ ವಸ್ತುಗಳಿಂದ ಕಚೇರಿಯಲ್ಲಿರುವ ಸಾಮಾಗ್ರಿಗಳನ್ನು ಹಾನಿಗೊಳಿಸಿರುವ ಘಟನೆ ಅ.೩೫ ರಂದು ವರದಿಯಾಗಿದೆ.


ಘಟನೆಯಿಂದ ಕಚೇರಿಯಲ್ಲಿದ್ದ ಪುಸ್ತಕಗಳು,ಮೇಜು ಮುಂತಾದ ಸಾಮಗ್ರಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ