
ಬೆಳ್ಳಾರೆ ಸಮೀಪದ ಪಾಲ್ತಾಡಿನಲ್ಲಿ ವ್ಯಾನೊಂದು ಪಲ್ಟಿಯಾಗಿದ್ದು ಪ್ರಯಾಣಿಕರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ವ್ಯಾನಿನಲ್ಲಿ 19 ಜನ ಪ್ರಯಾಣಿಸುತ್ತಿದ್ದು ವ್ಯಾನ್ ಬೆಳ್ಳಾರೆಯ ಮಣಿಕ್ಕಾರದಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿತ್ತೆನ್ನಲಾಗಿದೆ.


ಗಾಯಗೊಂಡವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ವ್ಯಾನ್ ರಸ್ತೆಗೆ ಅಡ್ಡಲಾಗಿ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತು ಬಳಿಕ ಕ್ರೈನ್ ಮುಖಾಂತರ ವ್ಯಾನನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು ಎಂದು ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

