ಸುಳ್ಯ ಜಟ್ಟಿಪಳ್ಳದಲ್ಲಿ ಮನೆಗೆ ನುಗ್ಗಿರುವ ಕಳ್ಳರ ತಂಡದಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆತಂಕದಲ್ಲಿ ಪರಿಸರ ನಿವಾಸಿಗಳು.

ಸುಳ್ಯ ಜಟ್ಟಿಪಳ್ಳದಲ್ಲಿ ಮನೆಗೆ ನುಗ್ಗಿರುವ ಕಳ್ಳರ ತಂಡದಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆತಂಕದಲ್ಲಿ ಪರಿಸರ ನಿವಾಸಿಗಳು.

ಸುಳ್ಯ ಪರಿಸರದಲ್ಲಿ ದಿನೇ ದಿನೇ ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಅ. ೨೦ ರಂದು ಕೂಡ ನಗರದ ಜಟ್ಟಿಪಳ್ಳದ ಮನೆಯಿಂದ ಕಳ್ಳತನ ನಡೆದಿದೆ.


ಸುಳ್ಯದ ಜಟ್ಟಿಪಳ್ಳದಲ್ಲಿರುವ ಬೋರುಗುಡ್ಡೆಯಲ್ಲಿ ವಾಸವಾಗಿರುವ ನಿವೃತ ಪ್ರಾಂಶುಪಾಲೆಯ ಮನೆಯಿಂದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಸುಳ್ಯದ ಜಟ್ಟಿಪಳ್ಳದಲ್ಲಿ ವಾಸವಿರುವ ಬ್ಯಾಂಕ್ ಉದ್ಯೋಗಿಯಾಗಿದ್ದ ಮೋಹನ್ ದಾಸ್ ಮುದ್ಯ ಮತ್ತು ಅವರ ಪತ್ನಿ ನಿವೃತ ಪ್ರಾಂಶುಪಾಲೆ ಮಾಲತಿಯವರ ಮನೆಯಿಂದ ಚಿನ್ನಾಭರಣ ಕಳವು ಮಾಡಲಾಗಿದೆ. ಅವರು ಇಬ್ಬರು ಚೆನ್ನೈಗೆ ಹೋಗಿ ಬಳಿಕ ಹಾಸನದಲ್ಲಿದ್ದ ಮಗಳ ಮನೆಗೆ ತೆರಳಿದ್ದರು ಮನೆಯ ಬಾಗಿಲು ಮುರಿದಿರುವ ಬಗ್ಗೆ ನೆರೆಮನೆಯವರಿಂದ ಮಾಹಿತಿ ತಿಳಿದು ಮನೆಗೆ ಮರಳಿ ಬಂದು ನೋಡಿದಾಗ ಮನೆಯಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಬಂಗಾರದ ಗಂಟನ್ನು ಕಳ್ಳರು ತೆಗೆದುಕೊಂಡು ಹೋಗಿದ್ದರು.


ಮನೆಯ ಮಹಡಿಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾತ್ರಿಯೇ ಮಂಗಳೂರಿನಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿ ತಪಾಸಣೆ ಮಾಡಲಾಗಿತ್ತು.
ವಿಷಯ ತಿಳಿದು ಹಾಸನದಿಂದ ಮನೆಗೆ ಬಂದ ಮೋಹನ್‌ದಾಸ್ ದಂಪತಿಗೆ ಶಾಕ್ ಆಗಿತ್ತು. ಏಕೆಂದರೆ ಕಳ್ಳರು ಸುಮಾರು 20 ಲಕ್ಷ ರೂ ಮೌಲ್ಯದ 350 ಗ್ರಾಂ ಚಿನ್ನಾಭರಣ ಕಳವು ನಡೆಸಿದ್ದಾರೆ ಅನ್ನುವುದು ತಿಳಿದು ಬಂದಿದೆ.ಮೂಲಗಳ ಪ್ರಕಾರ ಉಂಗುರ, ಸರ, ನೆಕ್ಲೇಸ್ ಸಹಿತ ಸುಮಾರು 350 ಗ್ರಾಂ. ನಷ್ಟು ಚಿನ್ನಾಭರಣ ಕಳವಾಗಿದೆ. ಕಳ್ಳರ ಜಾಡು ಹಿಡಿದು ಹೊರಟಿರುವ ಪೊಲೀಸರು ಈಗ ತನಿಖೆ ಮುಂದುವರಿಸಿದ್ದಾರೆ.ಇದೀಗ ಹೆಚ್ಚುತ್ತಿರುವ ಕಳ್ಳತನ ಪ್ರಖರಣಗಳಿಂದ ಜನರು ಆತಂಕಿತರಾಗಿದ್ದಾರೆ.

ರಾಜ್ಯ