
ಡೆಲ್ಲಿ : ಇಂದು ಅಫ್ಘಾನ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 272 ರನ್ ಗಳಿಸಿತು.ಅಫ್ಘಾನ್ ಪರ ಕ್ಯಾಪ್ಟನ್ ಶಾಹಿದಿ 80 ರನ್, ಹಾಗೂ ಅಸ್ಮತುಲ್ಲಾ 62 ರನ್ ಗಳಿಸಿದರು, ಭಾರತ ಪರ ಬುಮ್ರಾ 4 ವಿಕೆಟ್, ಹಾಗೂ ಹಾರ್ಧಿಕ್ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ ನಾಯಕ ರೋಹಿತ್ ಶರ್ಮ ಭರ್ಜರಿ ಶತಕ 131 ರನ್, ಹಾಗೂ ಕೊಹ್ಲಿ 55 ರನ್ ನೆರವಿಂದ 35 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿ ಗುರಿ ತಲುಪಿತು.
ಅಫ್ಘಾನ್ ಪರ ರಾಶಿದ್ ಖಾನ್ 2 ವಿಕೆಟ್ ಪಡೆದರು.


ಹಲವು ದಾಖಲೆ ಬರೆದ ರೋಹಿತ್
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಟ ಸಿಕ್ಸರ್
ಏಕದಿನ ವಿಶ್ವಕಪ್ ನಲ್ಲಿ ಗರಿಷ್ಟ ಶತಕ ತನ್ನ ಹೆಸರಿಗೆ ಸೇರಿಸಿಕೊಂಡರು.
ಭಾರತದ ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಶನಿವಾರ ಅಹಮದಾಬಾದ್ ನಲ್ಲಿ ನಡೆಯಲಿದೆ.
ವರದಿ : ಫಾರೂಕ್ ಕಾನಕ್ಕೋಡ್