
ಚೆನ್ನೈ : ಎಂ ಚಿದಂಬರ ಕ್ರೀಡಾಂಗಣ ಚೆನ್ನೈ ನಲ್ಲಿ ನಡೆದ ಪಂದ್ಯಾಟದಲ್ಲಿ ಭಾರತವು 6 ವಿಕೆಟ್ ಗಳಿಂದ ಜಯಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಆಸ್ಟ್ರೇಲಿಯಾ ಭಾರತದ ಬೌಲಿಂಗ್ ದಾಳಿಗೆ 49.3 ಓವರ್ ಗಳಲ್ಲಿ 199 ರನ್ಸ್ ಅಷ್ಟೇ ಗಳಿಸಿತು.
ಆಸ್ಟ್ರೇಲಿಯಾ ಪರ ಸ್ಟಿವ್ ಸ್ಮಿತ್ ಗರಿಷ್ಠ 46 ರನ್ಸ್ ಬಾರಿಸಿದರು.
ಭಾರತ ಪರ ರವೀಂದ್ರ ಜಡೇಜಾ 3 ವಿಕೆಟ್, ಜಸ್ಪ್ರಿತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಸಿರಾಜ್, ಪಾಂಡ್ಯ, ಅಶ್ವಿನ್ 1 ವಿಕೆಟ್ ಪಡೆದರು.
ಭಾರತದ ಚೆಸಿಂಗ್ ವೇಳೆ ಮೊದಲ 3 ವಿಕೆಟ್ ನ್ನು 2 ರನ್ಸ್ ಅಂತರದಲ್ಲಿ ನಷ್ಟ ಪಡಿಸಿತು ನಂತರ ಸೇರಿದ ಕನ್ನಡಿಗ ರಾಹುಲ್ ಜೊತೆಗೆ ರನ್ ಮಷಿನ್ ಕೊಹ್ಲಿ 4 ನೇ ವಿಕೆಟ್ ಗೆ 165 ರನ್ಸ್ ಜೊತೆಯಾಟ ನಡೆಸಿ ತಂಡದ ಗೆಲುವನ್ನು ಅನಾಯಾಸ ಮಾಡಿದರು ಕೊಹ್ಲಿ 85 ರನ್ ಬಾರಿಸಿದಾಗ, ರಾಹುಲ್ ಔಟಾಗದೆ 97* ರನ್ಸ್ ಕಲೆಹಾಕಿದ, ಆಸ್ಟ್ರೇಲಿಯಾ ಪರ ಹಾಝಲ್ವುಡ್ 3 ವಿಕೆಟ್ ಪಡೆದರು.


ವರದಿ : ಫಾರೂಕ್ ಕಾನಕ್ಕೋಡ್