ಖಾಸಗಿ ಬಸ್ ಕಂಡೆಕ್ಟರ್ ನಿಂದ  ರಿಕ್ಷಾ ಚಾಲಕನ ಮೇಲೆ ಹಲ್ಲೆ ಆರೋಪ :  ಠಾಣೆ ಮಂದೆ ರಿಕ್ಷಾ ಚಾಲಕರ ಜಮಾವಣೆ

ಖಾಸಗಿ ಬಸ್ ಕಂಡೆಕ್ಟರ್ ನಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆ ಆರೋಪ : ಠಾಣೆ ಮಂದೆ ರಿಕ್ಷಾ ಚಾಲಕರ ಜಮಾವಣೆ

ಮಂಡೆಕೋಲು ತೆರಳುವ ಖಾಸಗಿ ಬಸ್ ಕಂಡೆಕ್ಟರ್ ರಿಕ್ಷಾ ಚಾಲಕನಿಗೆ ಸುಳ್ಯದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ರಿಕ್ಷಾ ಚಾಲಕ ಠಾಣೆಗೆ ದೂರು ನೀಡಿದ್ದು , ಸುಳ್ಯ ಪೋಲಿಸ್ ಠಾಣೆ ಮುಂದೆ ರಿಕ್ಷಾ ಚಾಲಕನ ಮೇಲೆ ಹಲ್ಲೆ ಖಂಡಿಸಿ ಜಮಾವಣೆಯಾಗಿದ್ದಾರೆ.ಮಂಡೆಕೋಲು ತೆರಳುವ ಮಹಾಲಕ್ಷ್ಮಿ ಬಸ್ ಕಂಡಕ್ಟರ್ ಸುಳ್ಯದ ತುದಿಯಡ್ಕದ ರಿಕ್ಷಾ ಚಾಲಕ ಪ್ರಸನ್ನರಿಗೆ ಹಲ್ಲೆ ಮಾಡಿರುವಬಗ್ಗೆ ದೂರು ಕೇಳಿಬಂದಿದ್ದು , ರಿಕ್ಷಾಚಾಲಕರು ಘಟನೆಯನ್ನು ಖಂಡಿಸಿ ಹಲ್ಲೆ ನಡೆಸಿರುವ ಕಂಡೆಕ್ಟರ್ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಬಾಡಿಗೆ ತೆರಳುತ್ತಿದ್ದಾಗ ಸರ್ವೀಸ್ ಗೆ ಪ್ರಯಾಣಿಕರನ್ನು ಹೇರಿದ್ದಾರೆ ಎಂದು ಹಲ್ಲೆ ನಡೆದಿದೆ ಎನ್ನಲಾಗಿದೆ.

ರಾಜ್ಯ