
ಕಲ್ಮಕಾರಿನ ಯುವಕನೊಬ್ಬ ತನ್ನಿಂದ ಪೋಲಿಸರು ಹಣ ಪಡೆದಿರುವ ಸಾಕ್ಷಿ ಕರಿಸುವ ವೀಡಿಯೋ ಮಾಡಿಕೊಂಡಿದ್ದು ,ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವೈರಲ್ ಆಗಿರುವ ಘಟನೆ ನಡೆದಿದೆ.



ಕಲ್ಮಕಾರಿನ ನಿಡುಬೆ ಓಂ ಪ್ರಕಾಶ್ ಹಣ ನೀಡಿದ ಯುವಕ ಇವರು ಪೋಲಿಸರಿಗೆ ಸ್ಥಳದಲ್ಲಿ ಹಣ ನೀಡಿದ ಬಳಿಕ ಪೋಲಿಸರಲ್ಲಿ ರಶೀದಿ ಕೇಳಿದಾಗ ಪೋಲಿಸರು ಕೋರ್ಟಿನ ನೋಟೀಸು ನೀಡಿದ್ದು ಮತ್ತು ಬೈಕ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ಕೋರ್ಟಿಗೆ ಹಾಜಾರಾಗುವುಂತೆ ತಿಳಿಸಿದ್ದಾರೆ ಈ ಎಲ್ಲಾ ಘಟನೆ ಗುಪ್ತವಾಗಿ ಯುವಕ ವೀಡಿಯೋ ಮಾಡಿಕೊಂಡಿದ್ದು ,ನಂತರ ಯುವಕ ವೀಡಿಯೋ ವೈರಲ್ ಮಾಡಿದ್ದು . ಯಾವುದೇ ಸರಕಾರಿ ಸೇವೆಯಲ್ಲಿರುವವರು ಸ್ಥಳದಲ್ಲಿ ಹಣ ಪಡೆದ ಬಳಿಕ ಸ್ಥಳದಲ್ಲಿಯೇ ರಸೀದಿ ನೀಡಬೇಕಾದುದು ನಿಯಮ,ಕೋರ್ಟಲ್ಲಿ ಕಟ್ಟಬೇಕಾದ ಹಣ ಕೋರ್ಟನಲ್ಲಿಯೇ ಕಟ್ಟಲು ಎಂದು ಯುವಕ ದೂರಿಕೊಂಡಿದ್ದಾನೆ
ಸ್ಪಷ್ಟನೆ ನೀಡಿದ ಪೋಲಿಸರು:
ಆದರೆ ಈ ಬಗ್ಗೆ ನ್ಯೂಸ್ ರೂಮ್ ಜೊತೆ ಮಾತನಾಡಿರುವ ಪೋಲಿಸರು, ಬೈಕ್ ಚಾಲಕನ ವಿರುದ್ದ ನಿರ್ಲಕ್ಷ್ಯ ಚಾಲನೆಯ ಕೇಸು ಹಾಕಿರುವುದು ಹೌದು ಆದರೆ 91/F ಪ್ರಕರಣವಾದುದರಿಂದ ರಸೀದಿಯನ್ನು ಸ್ಥಳದಲ್ಲಿಯೇ ನೀಡಬೇಕೆಂದೇನು ಇಲ್ಲ, ಇದ್ದು ಪೆಟ್ಟಿ ಕೇಸ್ ಆಗಿದ್ದು ಯುವಕ ನಿಂದ ಪಡೆದ ಹಣವನ್ನು ಕೋರ್ಟ್ ನಲ್ಲಿ ನಾವು ಕಟ್ಟಲು ಇದ್ದು ಇದರ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ಈ ಬಗ್ಗೆ ಯಾವುದೇ ಕಾನೂನು ತಜ್ಞರಲ್ಲಿ ವಿಚಾರಿಸಿಕೊಳ್ಳಬಹುದು, ಅಥವಾ ಕಾನೂನು ಮೊರೆ ಹೋಗಬಹುದು ಮತ್ತು ಕರ್ತವ್ಯದಲ್ಲಿರುವ ಪೋಲಿಸರ ವೀಡಿಯೋ ಹರಿಬಿಟ್ಟು ಪೋಲಿಸರ ನೈತಿಕ ಬಲ ಕುಗ್ಗಿಸುವ ಕೆಲಸ ಇದಾಗಿದೆ ಎಂದು ಹೇಳಿದ್ದಾರೆ.