
ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ವೈನ್ ಶಾಪ್ ಬಾಗಿಲು ಮುರಿದ ಕಳ್ಳರು, ಹಣ, ಮದ್ಯ ಬಾಟಲ್ ಹಾಗೂ ಇನ್ನಿತರ ಸೊತ್ತುಗಳೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.
ಗೋಳಿಕಟ್ಟೆ ವೈನ್ ಶಾಪ್‌ನಲ್ಲಿ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ .ಹೆಚ್ ನೀಡಿದ ದೂರಿನಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅವರು ವೈನ್ ಶಾಪ್ ನ ವ್ಯವಹಾರವನ್ನು ಮುಗಿಸಿ ರಾತ್ರಿ ಶಟರ್ ಬಾಗಿಲಿನ ಬೀಗವನ್ನು ಹಾಕಿ ಹೋಗಿದ್ದು. ಮರುದಿನ ಬೆಳಿಗ್ಗೆ ಶಾಪ್ ಸಿಬ್ಬಂದಿ ವೈನ್ ಶಾಪ್ ಗೆ ಬಂದಾಗ ಕಬ್ಬಿಣದ ಶಟರ್ ಬಾಗಿಲಿನ ಬೀಗ ಮುರಿದಿರುವ ವಿಚಾರವನ್ನು ಮ್ಯಾನೆಜರ್ ಗೆ ತಿಳಿಸಿದಂತೆ ಹೋಗಿ ನೋಡಲಾಗಿ, ವಿವಿಧ ಕಂಪೆನಿಗಳ ಮದ್ಯದ ಬಾಟಲಿಗಳು, ಕ್ಯಾಶ್ ಡ್ರಾಯರ್ ನಲ್ಲಿದ್ದ ರೂಪಾಯಿ 14336=00 ನಗದು ಹಣ, ಮೊಬೈಲ್ ಫೋನ್ -1, ಸ್ಟೀಲ್‌ನ ಪಾತ್ರ-1, ಹಾಗೂ ಕಾಣಿಕೆ ತುಂಬಿರುವ ಡಬ್ಬವನ್ನು ಸೇರಿದಂತೆ ಅಂದಾಜು ಮೌಲ್ಯ 8000/-ದ ಸಾಮಾಗ್ರಿಗಳನ್ನು ಕಳ್ಳರು ಕಳವು ಮಾಡಿದ್ದಾರೆ.ಎಂದು ದೂರು ನೀಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 169/2023 ಕಲಂ: 457,380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
