ಸುಳ್ಯ : ಔಷಧ ತರಲು ನಿಂತಿಕಲ್ಲಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿ ಹೃದಯಾಘಾತಕ್ಕೆ ಬಲಿ..!

ಸುಳ್ಯ : ಔಷಧ ತರಲು ನಿಂತಿಕಲ್ಲಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿ ಹೃದಯಾಘಾತಕ್ಕೆ ಬಲಿ..!

ಸುಳ್ಯ : ಅನಾರೋಗ್ಯ ನಿಮಿತ್ತ ಔಷಧ ತರಲು ಆಟೋದಲ್ಲಿ ತೆರಳಿದ್ದ ಯುವಕ ದಾರಿ ಮಧ್ಯೆ ಹೃದಯಾಘಾತ ಕ್ಕೆ ಬಲಿಯಾದ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ನಡೆದಿದೆ.
ಚಂದ್ರಶೇಖರ್ (35) ಹೃದಯಾಘಾತಕ್ಕೆ ಬಲಿಯಾದ ಯುವಕನಾಗಿದ್ದಾರೆ.
ಮಡಿಕೇರಿಯ ಚೆಂಬು ಗ್ರಾಮದ ಆನ್ಯಾಳ ನಿವಾಸಿಯಾಗಿರುವ ಚಂದ್ರಶೇಖರ್ ಅನಾರೋಗ್ಯ ನಿಮಿತ್ತ ಔಷಧ ಪಡೆಯಲು ಸುಳ್ಯದ ನಿಂತಿಕಲ್ಲಿಗೆ ಹೋಗಿದ್ದರು.
ಅಲ್ಲಿಂದ ಔಷಧಿ ಪಡೆದು ಆಟೋದಲ್ಲಿ ವಾಪಸ್ ಬರುವಾಗ ದಾರಿ ಮಧ್ಯೆ ಅಸ್ಪಸ್ಥಗೊಂಡಿದ್ದಾರೆ ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲು ಯತ್ನಿಸಿದರೂ ಅದಾಗಲೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ

ರಾಜ್ಯ