
ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನಾಚರಣೆಯ ಅಂಗವಾಗಿ 10ನೇ ವರುಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು.ನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಉತ್ಸವದ ಶೋಭಾಯಾತ್ರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವಿವಿಧ ಪದಾಧಿಕಾರಿಗಳು ಹಾಗೂ ಮೊಸರುಕುಡಿಕೆ ಸ್ಪರ್ಧಾಳುಗಳು ನೂರಾರು ಸಂಖ್ಯೆಯಲ್ಲಿ ಹೆಜ್ಜೆ ಹಾಕಿದರು.

ಸುಳ್ಯ ನಗರದ ಹಲವು ಕಡೆಗಳಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಲ್ಲಡ್ಕ ಬೊಂಬೆ, ಯಕ್ಷಗಾನ ಬೊಂಬೆ ಆಂಜನೇಯ ಸೇರಿದಂತೆ ಆಕರ್ಷಕ ಬೊಂಬೆಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿತ್ತು, ಬ್ಯಾಂಡ್ ಸೆಟ್ ಮತ್ತು ಡಿಜೆ ಶಬ್ದಕ್ಕೆ ನೂರಾರು ಸಂಖ್ಯೆಯಲ್ಲಿ ಯುವಕರು ಹೆಜ್ಜೆ ಹಾಕುತ್ತಾ ಅದ್ಧೂರಿಯ ಶೂಭಾಯಾತ್ರಗೆ ಮೆರಗನ್ನು ತಂದು ಕೊಟ್ಟರು.ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಗೆ ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ರವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ವಿ.ಹೆಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಸಮಿತಿಯ ಉಪಾಧ್ಯಕ್ಷ ರಜತ್ ಅಡ್ಕಾರ್, ಪ್ರಕಾಶ್ ಯಾದವ್, ನಿಕಟ ಪೂರ್ವ ಅಧ್ಯಕ್ಷ ಹರೀಶ್ ರೈ ಉಬರಡ್ಕ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್,ಗಿರೀಶ್ಕ ಕಲ್ಲುಗದ್ದೆ,ಸಂಘಟನೆಯ ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಮಹೇಶ್ ರೈ ಮೇನಾಲ, ಸುನಿಲ್ ರೈ ಮೇನಾಲ, ಚನಿಯ ಕಲ್ತಡ್ಕ, ಜಗದೀಶ್ ಸರಳಿಕುಂಜ,ರವಿಚಂದ್ರ ಕೊಡಿಯಾಲಬೈಲು, ವರ್ಷಿತ್ ಚೊಕ್ಕಾಡಿ,ಭಾನುಪ್ರಕಾಶ್ ಪೆಲತ್ತಡ್ಕ, ದೇವಿಪ್ರಸಾದ್ ಅತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು,

