
ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿ ಯು ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಅವರಿಂದ ದಿಕ್ಸುಚಿ ಭಾಷಣ ಮಾಡಲಾಯಿತು.ಪೋಷಕರಿಗೆ ವಿದ್ಯಾರ್ಥಿಗಳ ಮುಂದಿನ ವಿದ್ಯಾಬ್ಯಾಸ, ಕೆರಿಯರ್ ಗೈಡೆನ್ಸ್ ಕುರಿತಂತೆ ಹಾಗೂ ಮುಂದಿನ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾತ್ರ, ಉನ್ನತ ವಿದ್ಯಾಭ್ಯಾಸದ ಕುರಿತಂತೆ ಸಂಪೂರ್ಣ ವಿವರಣೆಗಳನ್ನು ಪೋಷಕರಿಗೆ ನೀಡುವ ಮೂಲಕ ಶುಭಹಾರೈಸಿದರು.

ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಅವರು ಮಾತನಾಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾಲೇಜಿನ ಶಿಸ್ತು ಪಾಲನೆಯಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು. ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಅವರು ಕಾಲೇಜಿನ ನಿಯಮಗಳನ್ನು ಪೋಷಕರಿಗೆ ವಿವರಿಸಿದರು.ಶ್ರೀಮತಿ ಮಲ್ಲಿಕಾ ಹಾಗೂ ಶ್ರೀಮತಿ ಭವ್ಯ ಅವರು ಪ್ರಥಮ ಹಾಗೂ ದ್ವಿತೀಯ ಪಿ ಯು ಪೋಷಕರಿಗೆ ಕಾಲೇಜಿನ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಕವಿತಾ ಅವರು ನಿರೂಪಿಸಿದರು.ಶ್ರೀಮತಿ ರತ್ನಾವತಿ ಮತ್ತು ಶ್ರೀಮತಿ ಅರ್ಪಿತಾ ಅವರು ಕಾರ್ಯಕ್ರಮ ಸ್ವಾಗತಿಸಿದರು. ಶ್ರೀಮತಿ ಅಭಿಜ್ಞಾ ಅವರು ಕಾರ್ಯಕ್ರಮ ಸ್ವಾಗತಿಸಿದರು.

