
ಲಂಚ ಪಡೆದ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ ಶ್ರೀನಿವಾಸ ಮೂರ್ತಿ ಅಮಾನತು ಮಾಡುವಂತೆ ಶಾಸಕ ಪೊನ್ನಣ್ಣ ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ
ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಯ ಸಂಬಂಧಿಕರಿಂದ ಹಣ ಪಡೆಯುತ್ತಿದ್ದ ವೈದ್ಯ ಶ್ರೀನಿವಾಸ ಮೂರ್ತಿ ಅವರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ನಿನ್ನೆ ವೈರಲ್ ಆಗಿತ್ತು.ಇದನ್ನು ಗಮನಿಸಿ ಲಂಚಕೋರ ವೈದ್ಯನ ಅಮಾನತ್ತಿಗೆ ಆದೇಶವನ್ನು ಶಾಸಕ ಪೊನ್ನಣ್ಣನೀಡಿದ್ದಾರೆ ಎಂದು ಹೇಳಲಾಗಿದೆ ಬ್ರಷ್ಟಾಚಾರ ವಿರೋಧಿ ಕಾಯ್ದೆ ಅಡಿಯಲ್ಲಿ ತನಿಖೆಗೂ ಆದೇಶ.
ಯಾರೇ ಅಧಿಕಾರಿ, ಸರ್ಕಾರಿ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟದ್ದು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪೊನ್ನಣ್ಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


