ಅ.1 ರಂದು ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜದ ವತಿಯಿಂದ ಗಾಣಿಗ ಸಮ್ಮಿಲನ 2023 : ಕ್ರೀಡೋತ್ಸವ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ.

ಅ.1 ರಂದು ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜದ ವತಿಯಿಂದ ಗಾಣಿಗ ಸಮ್ಮಿಲನ 2023 : ಕ್ರೀಡೋತ್ಸವ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ.

ಅ.1 ರಂದು ಸುಳ್ಯ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸುಳ್ಯತಾಲೂಕು ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ ಗಾಣಿಗ ಸಮ್ಮಿಲನ 2023 ರ ಕಾರ್ಯಕ್ರಮ ನಡೆಯಲಿದ್ದು ,ಇದರ ಅಂಗವಾಗಿ ಸಮಾಜ ಬಾಂಧವರಿಗೆ ಕ್ರೀಡೋತ್ಸವ ಕಾರ್ಯಕ್ರಮ ಸೆ.24 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸೆ.14 ರಂದು ಸುಳ್ಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ತಿಳಿಸಿದ್ದಾರೆ ಅವರು ಇಂದು ಸುಳ್ಯ ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ವಿವರ ತಿಳಿಸಿದರು.

ಸುಳ್ಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಸಮಾಜ ಬಾಂಧವರು ಒಂದು ಸೇರಿ ಗಾಣಿಗ ಸಮ್ಮಿಲನ 2023 ಕಾರ್ಯಕ್ರಮದ ಆಯೋಜನೆ ಮಾಡಿದ್ದೇವೆ. ಈ ಸಮ್ಮಿಲನದಲ್ಲಿ ತುಳು, ಕನ್ನಡ ಮಲಯಾಳಂ ಮಾತೃ ಬಾಷೆಯ ಎಲ್ಲಾ ಗಾಣಿಗ ಸಮಾಜದವರು ಹಾಗೂ ಜಿಲ್ಲೆ ಮತ್ತು ರಾಜ್ಯದ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಸರಕಾರದ ಮಟ್ಟದಲ್ಲಿ ಸವಲತ್ತುಗಳು ಸಮಾಜದವರಿಗೂ ತಲುಪುವಂತೆ, ಸಮಾಜ ಬಾಂಧವರಿಗೆ ಸರಕಾರದ ಮಟ್ಟದಲ್ಲಿ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಸರಕಾರದ ಗಮನ ಸೆಳೆಯುವುದು ಸಮ್ಮಿಲನದ ಉದ್ದೇಶ ವಾಗಿದೆ. ಸಮ್ಮಿಲನದಲ್ಲಿ ೪೩ ವರ್ಷಗಳಿಂದ ಸಂಘದ ವತಿಯಿಂದ ನೀಡುತ್ತಿರುವ ವಿದ್ಯಾನಿಧಿ, ಆರೋಗ್ಯ ನಿಧಿ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಹಿರಿಯ ಕಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು.
ಬೆಳಗ್ಗೆಸಂಘದ ವಾರ್ಷಿಕ ಮಹಾಸಭೆಯು ಚಂದ್ರಶೇಖರ ಉದ್ದಂತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಮುಖ್ಯ ಅತಿಥಿಗಳಾಗಿ ಹಿರಿಯರಾದ ಶಂಕರ ಪಾಟಾಳಿಪರಿವಾರಕಾನ,ಅಪ್ಪು ಮಾಸ್ತರ್
ಜಯನಗರ, ಮಹಾಲಿಂಗ ದೇರೆಬೈಲು, ಚಂದ ಕುಡೆಕಲ್ಲು, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ ಉಪಸ್ಥಿತರಿರುವರು.
ಈಸಂದರ್ಭದಲ್ಲಿಆರೋಗ್ಯ ನಿಧಿ ಹಾಗೂ ಪ್ರತಿಭಾ ಪುರಸ್ಕಾರವಿತರಿಸಲಾಗುವುದು.ಮುಂದಿನ ಅವಧಿಗೆ ನೂತನ ಸಮಿತಿಯ ರಚನೆ ಮಾಡಲಾಗುವುದು

ಬೆಳಗ್ಗೆ ಗಂಟೆ 10.00 ಕ್ಕೆ ಗಾಣಿಗ ಸಮ್ಮಿಲನ 2023 ರ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ.
ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಯವರು ಆಶೀರ್ವಚನ ನೀಡಲಿದ್ದಾರೆ. ಚಂದ್ರಶೇಖರ್ ಉದ್ದಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಮಾಜಿ ಸ್ಪೀಕರ್ ಸುದರ್ಶನ್, ಬೆಂಗಳೂರು ಗಾಣಿಗ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ, ಗಾಣಿಗ ಸಂಘ ಜಿಲ್ಲಾಧ್ಯಕ್ಷ ವಿಶ್ವಾಸ್ ದಾಸ್ ,
ಸ್ವಾಗತ ಸಮಿತಿ ಸಂಚಾಲಕ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸ.ಪ್ರ.ಕಾಲೇಜ್ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆ ಬೈಲು, ಪೆರ್ಣೆ ಭಗವತಿ ಕ್ಷೇತ್ರದ ಕರಣಿಕ ಚಂದ ಕುಡೆಕಲ್ಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಮ್ ಕೆ ಎಸ್, ಚಾರ್ಟೆಡ್ ಅಕೌಂಟ್ ದಯಾನಂದ ಕೆ, ಮಂಗಳೂರು ವಾಣಿಯ ಗಾಣಿಗ ಸಂಘ ಅಧ್ಯಕ್ಷ ರಾಮ ಮುಗ್ರೋಡಿ, ಪುತ್ತೂರು ಅಧ್ಯಕ್ಷ ಪ್ರಸಾದ್ ಬಾಕಿ ಮಾರ್, ವಿಟ್ಲ ಅಧ್ಯಕ್ಷ ಉದಯ ದಂಬೆ, ಈಶ್ವರಮಂಗಲ ಅಧ್ಯಕ್ಷ ಮಹಾಲಿಂಗ ಈಶ್ವರಮಂಗಲ ರವರು ಉಪಸ್ಥಿತರಿರುವರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. ಅಪರಾಹ್ನ ಗಂಟೆ 2:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಜಾನನ ನಾಟ್ಯಾಂಜಲಿ ಸುಜಾತ ಕಲಾ ಕ್ಷೇತ್ರ ಮುಳ್ಳೇರಿಯ ಇವರಶಿಷ್ಯವೃಂದ ದವರಿಂದ ನೃತ್ಯ ಶಿಲ್ಪಂ ಎಂಬ ವಿನೂತನ ಶೈಲಿಯಪ್ರದರ್ಶನವಾಗಲಿರುವುದು. ಬೂಡು ಶ್ರೀ ಭಗವತಿ ಕ್ಷೇತ್ರದ ಮಹದ್ವಾರದ ಬಳಿಯಿಂದ ಗಾಣಿಗ ಸಮ್ಮಿಲನದ ಜಾಥಾವು ಬೆಳಗ್ಗೆ ಹೊರಡಲಿರುವುದು ಎಂದು ಅಧ್ಯಕ್ಷ ಚಂದ್ರಶೇಖರ ರವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಶಂಕರಪಾಟಾಳಿ ಪರಿವಾರಕಾನ, ಆರ್ಥಿಕ ಸಮಿತಿ ಸಂಚಾಲಕ ಚಂದ್ರಶೇಖರ ಪನ್ನೆ, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು, ಮಹಿಳಾ ಘಟಕದ ಸದಸ್ಯೆ ಪ್ರೇಮ ಕುಡೆಕಲ್ಲು, ಸಮಿತಿ ಸಂಚಾಲಕ ಪ್ರವೀಣ್ ಜಯನಗರ, ಕೇಶವ ಮೊರಂಗಲ್ಲು, ನಿರ್ದೇಶಕ ರಾಧಾಕೃಷ್ಣ ಬೇರ್ಪಡ್ಕ ಉಪಸ್ಥಿತರಿದ್ದರು.

ರಾಜ್ಯ