ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!

ವಿಟ್ಲ ಕುದ್ದು ಪದವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಸಹೋದರರು ಗಂಭೀರ..!

ಬಂಟ್ವಾಳ : ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವು ಸಮೀಪ ನಡೆದಿದೆ.
ಮೈರ ಮೂಲದ ಕುದ್ದುಪದವು ನಿವಾಸಿ ಸಂಜೀವ ಬೆಳ್ಚಡರವರ ಪುತ್ರ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ.

ಎರಡು ಪ್ರತ್ಯೇಕ ತುರ್ತುವಾಹನಗಳ ಮೂಲಕ ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ಸಹೋದರರನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ವಿಷ ಸೇವನೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ.

ರಾಜ್ಯ