
ಹಟ್ಟಿಯಲ್ಲಿ ಕಟ್ಟಿ ಹಾಕಲ್ಪಟ್ಟಿದ್ದ ಎರಡು ದನಗಳನ್ನು ರಾತ್ರೋರಾತ್ರಿ ಗೋಕಳ್ಳರು ವಾಹನಕ್ಕೆ ತುಂಬಿಸಿ ಕದ್ದೊಯ್ದ ಬಗ್ಗೆ ತಿಳಿದುಬಂದಿದೆ, ಗೂನಡ್ಕ ಶಾರದಾ ಅನುದಾನಿತ ಶಾಲಾ ಬಳಿಯ ಸಂಕೇಶ ವರದರಾಜ್ ರವರು ತಮ್ಮ ಹಟ್ಟಿಯಲ್ಲಿ ದನಗಳನ್ನು ಕಟ್ಟಿ ಹಾಕಿದ್ದರು ,ಈ ಪೈಕಿ ಎರಡು ಗಡಸುಗಳನ್ನು ಸೆ.೧೨ ರ ರಾತ್ರಿ ಗೊ ಕಳ್ಳರು ತಮ್ಮ ವಾಹನಕ್ಕೆ ತುಂಬಿಸಿ ಕದ್ದೊಯ್ದಿದ್ದಾರೆ, ಸ್ಥಳದಲ್ಲಿ ಬ್ರೆಡ್ ಪ್ಯಾಕೆಟ್ ದೊರೆತಿದ್ದು ದನಗಳಿಗೆ ಬ್ರೆಡ್ ಆಮಿಷ ತೋರಿಸಿ ಕದ್ದೊಯ್ದಿರಬಹುದು ಎಂದು ಶಂಕಿಸಲಾಗಿದೆ, ವಾಹನಗಳಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಳ್ಳರು ಇದೀಗ ಮುಂದುವರೆದು ಹಟ್ಟಿಯಿಂದಲೇ ದನಗಳನ್ನು ಕಳವು ಮಾಡಲು ಹೊರಟಿರುವುದು ಇದೀಗ ಈ ಭಾಗದ ರೈತರ , ಹೈನುಗಾರರ ಆತಂಕಕ್ಕೆ ಕಾರಣವಾಗಿದೆ.

