ಕನಕಮಜಲು: ಬೈಕ್ ಗೆ -ಕಾರು ಡಿಕ್ಕಿ :ಬೈಕ್ ಸವಾರನಿಗೆ ಗಂಭೀರ ಗಾಯ: ನಿಲ್ಲಿಸದೆ ಪರಾರಿಯಾದ ಕಾರು ಚಾಲಕ.

ಕನಕಮಜಲು: ಬೈಕ್ ಗೆ -ಕಾರು ಡಿಕ್ಕಿ :ಬೈಕ್ ಸವಾರನಿಗೆ ಗಂಭೀರ ಗಾಯ: ನಿಲ್ಲಿಸದೆ ಪರಾರಿಯಾದ ಕಾರು ಚಾಲಕ.

ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ,ವಿದ್ಯಾರ್ಥಿ ಗಂಬೀರ ಗಾಯಗೊಂಡ ಘಟನೆ ಹಾಗೂ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿರುವ ಘಟನೆ ನಡೆದಿದೆ.


ಸುಳ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಗೆ ಕನಕಮಜಲು ಗ್ರಾಮ ಪಂಚಾಯತ್ ಬಳಿ ಢಿಕ್ಕಿ ಹೊಡೆದು, ಕಾರು ಚಾಲಕ ಅಪಘಾತ ನಡೆಸಿ , ನಿಲ್ಲಿಸದೇ ಪರಾರಿಯಾಗಿದ್ದು, ಕೈ ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಸುಳ್ಯ ವೈದ್ಯ ವಿದ್ಯಾರ್ಥಿ ಯನ್ನು ಸ್ಥಳೀಯರ ಸಹಕಾರದಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಕಾಲು ಪ್ರಾಕ್ಚರ್ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.ಇನ್ನು ಡಿಕ್ಕಿ ಹೊಡೆದ ಕಾರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ರಾಜ್ಯ