ಬಾಲಕರ ವಿದ್ಯಾರ್ಥಿ ನಿಲಯದಿಂದ ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಗಳನ್ನು ದೀಕ್ಷಿತ್(15) ಮತ್ತು ಗಗನ್(14) ಎನ್ನಲಾಗಿದೆ.ಇಬ್ಬರು ವಿದ್ಯಾರ್ಥಿಗಳು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ತೆರಳಿದ್ದು, ಸಂಜೆ ವಾಪಾಸ್ಸು ಬಂದಿಲ್ಲ. ಈ ಬಗ್ಗೆ ಉಳಿದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದಾಗ ಶಾಲೆಗೆ ಹೋಗದೇ ಇರುವ ವಿಚಾರ ತಿಳಿದುಬಂದಿದೆ. ಬಾಲಕರ ಮನೆಯಲ್ಲಿ ವಿಚಾರಿಸಿ, ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರು ಪತ್ತೆಯಾಗದ ಹಿನ್ನಲೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

