ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.

ಜುಲೈ 30 ರಂದು ಅಜ್ಜಾವರದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಕಂಡದ ಗೌಜಿ ಕೆಸರ್ದ ಪರ್ಬ.

ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲಗಳ ವತಿಯಿಂದ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಆಟೋಟ ಸ್ಪರ್ಧೆ ಜುಲೈ 30 ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲದ ಗದ್ದೆಯಲ್ಲಿ ನಡೆಯಲಿದೆ ಎಂದು ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.

ಗ್ರಾಮದ ಯುವಕ ಮತ್ತು ಯುವತಿ ಮಂಡಲ ಸೇರಿಕೊಂಡು ಎರಡನೇ ಬಾರಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ ಮಕ್ಕಳು, ಮಹಿಳೆಯರು,ಪುರುಷರು, ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು. ಯಾವುದೇ ಭಾಗಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರು ಪಾಲ್ಗೊಳ್ಳಬಹುದು, ಸ್ಪರ್ಧಾ ದಿನವೇ ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು.ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಮಾತನಾಡಿ ಕಂಡದ ಗೌಜಿ ಕೆಸರ್ದ ಪರ್ಬ ವಿಶೇಷತೆ ಮತ್ತು ವಿಭಿನ್ನತೆಯಿಂದ ಕೂಡಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.


ಸುದ್ದಿಗೋಷ್ಠಿಯಲ್ಲಿ ಪ್ರತಾಪ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ಕೋಶಾಧಿಕಾರಿ ಲೋಕೇಶ್ ಮಾವಿನಪಳ್ಳ, ಚೈತ್ರ ಯುವತಿ ಮಂಡಲದ ಖಜಾಂಜಿ ರಜನಿ ಗೋರಡ್ಕ, ಸದಸ್ಯರಾದ ಲಕ್ಷ್ಮಿ ಪಳ್ಳತ್ತಡ್ಕ, ವೇದಾವತಿ ಕರ್ಲಪ್ಪಾಡಿ ಉಪಸ್ಥಿತರಿದ್ದರು.

ರಾಜ್ಯ