ಜುಲೈ 19.ಬೆಳ್ಳಿ ಹಬ್ಬದ ಸಂಭ್ರಮದಲ್ಲಿ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ :ಕೇರ್ಪಳದ ಭಂಟರ ಭವನದಲ್ಲಿ ನಡೆಯಲಿದೆ ಉದ್ಘಾಟನಾ ಸಮಾರಂಭ.

ಜುಲೈ 19.ಬೆಳ್ಳಿ ಹಬ್ಬದ ಸಂಭ್ರಮದಲ್ಲಿ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ :ಕೇರ್ಪಳದ ಭಂಟರ ಭವನದಲ್ಲಿ ನಡೆಯಲಿದೆ ಉದ್ಘಾಟನಾ ಸಮಾರಂಭ.

ಕಳೆದ 25 ವರ್ಷಗಳ ಹಿಂದೆ ಸುಳ್ಯದಲ್ಲಿ ರಚನೆಯಾದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿವರ್ಷದ ಆಚರಣೆಯ ಸಂಭ್ರಮದಲ್ಲಿದ್ದು ಜುಲೈ19. ರಂದು ಸುಳ್ಯ ಕೇರ್ಪಳದ ಭಂಟರ ಭವನದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಎ ಎಸ್ ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಗಂಗಾಧರ ಮಟ್ಟಿ ವಹಿಸಲಿದ್ದು , ಕನ್ನಡ ಪ್ರಭ & ಸುವರ್ಣ್ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ ವಿ ಚಿದಾನಂದ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಗುಜರಾತ್ ಉಧ್ಯಮಿ ಫಾರೆಸ್ಟ್ ಕ್ರಿಯೇಟರ್ಸ್ ಸ್ಥಾಪಕ ಡಾ. ಆರ್ ಕೆ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಸುಮನಾರಾವ್ ಪುತ್ತೂರು ಹಾಗು ಬಳಗದವರಿಂದ ಸಂಗೀತ ಸಂಭ್ರಮ ವಿಶೇಷ ಕಾರ್ಯಕಮ ನಡೆಯಲಿದೆ, ಬಳಿಕ ಇದೇ ವೇದಿಕೆಯಲ್ಲಿ ಮಾಧ್ಯಮ ವಿಚಾರ ಸಂಕಿರಣ ಹಿರಿಯ ಪತ್ರಕರ್ತ ಶಿವ ಸುಬ್ರಹ್ಮಣ್ಯ ಕಲ್ಮಡ್ಕ ಅದ್ಯಕ್ಷತೆಯಲ್ಲಿ ನಡೆಯಲಿದ್ದು ವಿಸ್ತಾರ ನ್ಯೂಸ್ ಬೆಂಗಳೂರು ಇದರ ಸುದ್ದಿ ಸಂಪಾದಕ ಹರೀಶ್ ಕೇರ ಹಾಗೂ, ಸುದ್ದಿಯಾನ ಇಜಿಟಲ್ ಚಾನೆಲ್ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ವಿಚಾರಮಂಡನೆ ಮಾಡಲಿದ್ದಾರೆ.

ರಾಜ್ಯ