
ಧಾರಾಕಾರ ಸುರಿಯುತ್ತಿರುವ ಮಳೆಗೆ ಸುಳ್ಯದ ಆಲೆಟ್ಟಿಯ ಕೂರ್ನಡ್ಕ ಬಳಿ ಅವಘಡವೊಂದು ನಡೆದ ವರದಿಯಾಗಿದೆ.
ಹೊಳೆಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಕಾರ್ಮಿಕ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ನೀರು ಪಾಲಾದ ವ್ಯಕ್ತಿ ಕೇರಳ ಮೂಲದವರು ಎಂದು ಸಂಶಯಿಸಲಾಗಿದ್ದು,ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.


ಸ್ಥಳಕ್ಕೆ ಸುಳ್ಯ ಅಗ್ನಿ ಶಾಮಕ ದಳದವರು ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು ಕೊಚ್ಚಿ ಹೋಗಿರುವ ಕಾರ್ಮಿಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

