ಐವರ್ನಾಡು : ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

ಐವರ್ನಾಡು : ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

ಐವರ್ನಾಡಿನ ನೆಕ್ರಪ್ಪಾಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಗೌರಿಶಂಕರ ಸಿ.ಕೆಯವರ ಮಾಲಕತ್ವದ ಪ್ರಸನ್ನ ಕ್ಲಿನಿಕ್ ಐವರ್ನಾಡು ಮುಖ್ಯ ರಸ್ತೆ ಸಮೀಪ ನೂತನವಾಗಿ ನಿರ್ಮಾಣವಾದ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತಗೊಂಡು ಜು.06 ರಂದು ಶುಭಾರಂಭಗೊಂಡಿತು.ವಿಶ್ರಾಂತ ಪ್ರಾಂಶುಪಾಲರಾದ ಡಾ.ವಿಘ್ನೇಶ್ವರ ವರ್ಮುಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಬೆಳಿಗ್ಗೆ ಪುರೋಹಿತ ಉದನೇಶ್ವರ ಭಟ್ ಮಂಜಳಗಿರಿ ಇವರು ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಪ್ರಸನ್ನ ಕುಮಾರಿ, ಶ್ರೇಯಸ್ವಿ ಗೌರಿಶಂಕರ್,ಕಾಂಪ್ಲೆಕ್ಸ್ ಮಾಲಕ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಶ್ರೀಮತಿ ಪೂರ್ಣಶ್ರೀ ವಿ.,ನಿತಿನ್ ಶಂಕರ್,ಸಚಿನ್ ಕೇಶವ, ಶ್ರೀಮತಿ ಉಮಾದೀಪಿಕ, ಶ್ರೀಮತಿ ಪ್ರಜ್ಞಾ, ಮುರಳೀಕೃಷ್ಣ,ಶಿವರಾಮ ಭಟ್, ರಾಜೇಶ್ ನೆಕ್ರೆಪ್ಪಾಡಿ, ಬಾಲಕೃಷ್ಣ ಮಡ್ತಿಲ,ಉಮೇಶ ಮಾಸ್ತರ್ ಪಲ್ಲತ್ತಡ್ಕ,ವಿಜಯಲಕ್ಷ್ಮಿ ಕೆ, ಪದ್ಮನಾಭ ನಿಡುಬೆ,ಕುಶಾಲಪ್ಪ ಕೇಮಾಜೆ,ಜುನೈದ್ ನಿಡುಬೆ,ಶರಿಫ್ ನಿಡುಬೆ ,ಅನಿಲ್ ಕುತ್ಯಾಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ರಾಜ್ಯ