
ಮಂಗಳೂರು: ಕಳೆದೆರಡು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಮಂಗಳೂರು ನಗರದ ಪಂಪ್ವೆಲ್ (ಮಹಾವೀರ) ವೃತ್ತ ಪೂರ್ಣ ಜಲಾವೃತಗೊಂಡಿದೆ.

ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಪಂಪ್ವೆಲ್ ಮೇಲ್ಸೇತುವೆ ಅಡಿಭಾಗ ಸುತ್ತಲು ನೀರು ತುಂಬಿದ ಪರಿಣಾಮ ಪ್ರಮುಖ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಜಂಕ್ಷನ್ನಲ್ಲಿ ವಾಹನಗಳು ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದು ಟ್ರಾಫಿಕ್ ದಟ್ಟಣೆ ಕಂಡುಬಂದಿದೆ.
ಪಂಪ್ವೆಲ್ ಜಂಕ್ಷನ್, ಸಮೀಪದ ಕೊಟ್ಟಾರ ಚೌಕಿ ಜಂಕ್ಷನ್ ಕೂಡ ಭಾರೀ ಮಳೆಯಿಂದ ಜಲಾವೃತವಾಗಿದ್ದು,ಎರಡು ಪ್ರಮುಖ ಜಂಕ್ಷನ್ಗಳು ಹೆಚ್ಚು ಬಾಧಿತವಾಗಿದೆ. ವಾಹನ ಚಾಲಕರು ಮತ್ತು ಪ್ರಯಾಣಿಕರು ಜಲಾವೃತ ಪ್ರದೇಶಗಳಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
