ತಂದೆ – ತಾಯಿಯ ಬೆಲೆ ತಿಳಿಯದ ನಾವು…

ತಂದೆ – ತಾಯಿಯ ಬೆಲೆ ತಿಳಿಯದ ನಾವು

ನಮಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ
ತಂದೆ ತಾಯಿಯ ಬೆಲೆ ತಿಳಿಯದ ನಾವು.
ಯಾವುದೋ ಹುಡುಗಿಗೋಸ್ಕರ ನಮ್ಮ
ಜೀವನವನ್ನೇ ಕಳೆದುಕೊಳ್ಳುತ್ತೇವೆ.
 
  ತಂದೆ ತಾಯಿಯ ಪ್ರೀತಿಯೇ ಹೆಚ್ಚೆಂದು
ತಿಳಿಯದ ನಾವು. ಹುಡುಗಿ ಪ್ರೀತಿ ಹೆಚ್ಚೆಂದು
ಅವಳ ಹಿಂದೆಯೇ ಹೋಗುತ್ತೇವೆ.

ನಮ್ಮ ತಂದೆ ತಾಯಿಯನ್ನು ಒಂದು ದಿವಸನೂ ಊಟ ಮಾಡಿದ್ರ ಅಂತ ಕೇಳದ ನಾವು
ಹುಡುಗಿಗೆ ಸರಿಯಾದ ಸಮಯಕ್ಕೆ ಒಂದು ಇಪ್ಪತ್ತು
ಬಾರಿ ಆದರು ಕೇಳಿರತ್ತೇವೆ.

ನಮ್ಮ ತಂದೆ ತಾಯಿಯರಿಗೆ
ಒಂದು ಬಟ್ಟೆಯನ್ನೇ ಕೊಡಿಸದ ನಾವು ಹುಡುಗಿಗೋಸ್ಕರ ಕೇಳಿದ್ದನೆಲ್ಲ ಕೊಡಿಸುತ್ತೇವೆ…
ಅದು ಕೂಡ ತಂದೆ ತಾಯಿಯರ ದುಡ್ಡೆ ಆಗಿರುತ್ತದೆ.

ಅಪ್ಪ ಅಮ್ಮನಿಗೆ ಹುಷಾರು ಇಲ್ಲದಿದ್ದರೇ
ಅಷ್ಟು ತಲೆಗೆ ಹಾಕಿಕೊಳ್ಳದ ನಾವು. ಹುಡುಗಿಗೆ ಹುಷಾರು ಇಲ್ಲ ಅಂದರೆ ದಿನವೆಲ್ಲಾ ನಿದ್ದೇನೆ ಮಾಡೊದಿಲ್ಲ…

ಹುಡುಗಿ ಜೊತೆ ದಿನವೆಲ್ಲಾ ಕಳೆಯಲು ಬಯಸುವ ನಾವು. ತಂದೆ ತಾಯಿಯರ ಒಟ್ಟಿಗೆ ಒಂದು ಗಂಟೆನು ಇರಲು ಬಯಸುವುದಿಲ್ಲ….

ತಂದೆ ತಾಯಿಯರನ್ನೆ ಸರಿಯಾಗಿ ನೋಡಿಕೊಳ್ಳದ ನಾವು ಅ ಹುಡುಗಿಗೆ ಮಾತು ಕೊಡುತ್ತೇವೆ.
ನಿನ್ನನ್ನು ರಾಣಿ ತರ ನೋಡಿಕೊಳ್ಳುತ್ತೇನೆ ಎಂದು…

ತಂದೆ ತಾಯಿಯರ ನಿಜವಾದ
ಪ್ರೀತಿಯನ್ನು ಕಡೆಗಣಿಸುವ ನಾವು
ಅವಳ ನಾಟಕೀಯ ಪ್ರೀತಿಯನ್ನು ಕಡೆಗಣಿಸಲಿಲ್ಲ…

ಪ್ರತಿ ಕ್ಷಣ ತಂದೆ ತಾಯಿಯರು ನಮ್ಮ ನೆನಪಿನಲ್ಲೇ ಇರುತ್ತಾರೆ. ಆದರೆ ನಾವು ಅವಳ ನೆನಪಲ್ಲೇ ಇರುತ್ತೇವೆ…
“ನಿಜವಾದ ಪ್ರೀತಿಗೆ ಸ್ಪಂದಿಸದ ನಾವು ಯಾರದೋ ಮರಳು ಮಾತಿಗೆ ಶರಣಾಗುತ್ತೇವೆ”….

NAME :MANJUNATH HUTAGANNA.

1st year B.Ed….
MAR IVANIOS COLLEGE OF EDUCATION
Kunthoor, perabe post, kadaba taluk, D.K

WhatsApp Number : 9148169369.

ರಾಜ್ಯ