ಪೆರಾಜೆ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿಗರು ಮತ್ತು ಕಾಂಗ್ರೇಸ್ ಬೆಂಬಲಿಗರ ಮಾತಿನ ಚಕಮಕಿ: ಪೊಲೀಸ್ ಮಧ್ಯ ಪ್ರವೇಶ.

ಪೆರಾಜೆ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿಗರು ಮತ್ತು ಕಾಂಗ್ರೇಸ್ ಬೆಂಬಲಿಗರ ಮಾತಿನ ಚಕಮಕಿ: ಪೊಲೀಸ್ ಮಧ್ಯ ಪ್ರವೇಶ.

ಪೆರಾಜೆ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಚುನಾವಣೆ ನಡೆಯುತ್ತಿದ್ದು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪೋಲಿಸ್ ಮದ್ಯ ಪ್ರವೇಶಿಸಿ ಗುಂಪುಗಳನ್ನು ಚದುರಿಸಿದ ವಿಧ್ಯಮಾನ ನಡೆದಿದೆ, ಪೆರಾಜೆ ಸಹಕಾರಿ ಸಂಘದಲ್ಲಿ ಬೆಳಿಗ್ಗೆ ೮.ಗಂಟೆ ಯಿಂದು ಚುನಾವಣೆ ಆರಂಭವಾಗಿದ್ದು ಒಟ್ಟು13 ಸ್ಥಾನಗಳಿಗೆ 26 ಮಂದಿ ಚುನಾವಣಾ ಕಣದಲ್ಲಿದ್ದಾರೆ , ಬೆಳಗಿನಿಂದಲೇ ಬಿರುಸಿನ ಮತದಾನ ನಡೆದಿದ್ದು ಎರಡು ಕಡೆಯಿಂದಲು ಪಕ್ಷಗಳ ಬೆಂಬಲಿತರು ಸ್ಥಳದಲ್ಲಿ ಠಿಕಾಣಿ ಹೂಡಿದ್ದರು, ಮತದಾನ ಕೇಂದ್ರದ 100 ಮೀ ಅಂತರ ಕಾಯ್ದುಕೊಳ್ಳಬೇಕಾದ ಅಭ್ಯರ್ಥಿಗಳು ,ಬೆಂಬಲಿತರು ಸಹಕಾರಿ ಸಂಘದ ಜಗುಲಿಯಲ್ಲಿ ಇದ್ದು ಕೆಲವು ಮಂದಿ ಮತದಾನಕ್ಕೆ ಬರುವವರನ್ನು ಮಹಿಳೆಯೊಬ್ಬರು ಕರೆದು ಮತಕೇಂದ್ರಕ್ಕೆ ಕರೆದೊಯ್ದು ಮತಹಾಕಿಸಿದರೆಂದು ಮತ್ತು ಅಭ್ಯರ್ಥಿ ನಾಗೇಶ್ ಕುಂದಲ್ಪಾಡಿ ಮತದಾನ ಕೇಂದ್ರ ಬಳಿ ನಿಂತಿದ್ದನ್ನು ಮನು ಪೆರುಮುಂಡ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿ ಪ್ರಶ್ನಿಸಿದ್ದು, ಮನು ಪೆರುಮುಂಡ ಮತ್ತು ನಾಗೇಶ್ ಕುಂದಲ್ಪಾಡಿ ಮತ್ತು ಎರಡು ಕಡೆಯವರ ಬೆಂಬಲಿಗರಿಗೂ ಮಾತಿನ ಚಕಮಕಿ ನಡೆದು ಭಿಗುವಿನ ವಾತಾವರಣ ನಿರ್ಮಾಣವಾಯಿತು. ಎರಡು ಕಡೆಯವರನ್ನು ಸ್ಥಳದಲ್ಲಿ ನಿಯುಕ್ತಿಯಿದ್ದ ಪೋಲಿಸರು ಚದುರಿಸಿ ಕಳಿಸಿದ ಘಟನೆ ನಡೆಯಿತು, ಸ್ಥಳದಲ್ಲಿ ಇನ್ನೂರಕ್ಕು ಮಿಕ್ಕಿ ಎರಡೂ ಕಡೆಯವರ ಬೆಂಬಲಿಗರು ಇದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ, ಇದೀಗ ಪೋಲಿಸರು ಸಹಕಾರಿ ಸಂಘದ ಸುತ್ತ ಹಗ್ಗ ಕಟ್ಟಿ ಸ್ಥಳದಲ್ಲಿ ನಿರ್ಭಂಧ ಹೇರಿದ್ದರೂ, ಜನರೂ ಮಾತ್ರ ಇನ್ನೂ ಅಲ್ಲೇ ಇರುವುದಾಗಿ ತಿಳಿದು ಬಂದಿದೆ,

ರಾಜ್ಯ