ಪೆರಾಜೆ ಸಹಕಾರಿ ಸಂಘಕ್ಕೆ ಚುನಾವಣೆ :13 ಕ್ಕೆ 13 ಸ್ಥಾನಗಳನ್ನು ತನ್ನದಾಗಿಸಿಕೊಂಡು ಜಯಭೇರಿ ಭಾರಿಸಿದ ಬಿಜೆಪಿ ಬೆಂಬಲಿತರು

ಪೆರಾಜೆ ಸಹಕಾರಿ ಸಂಘಕ್ಕೆ ಚುನಾವಣೆ :
13 ಕ್ಕೆ 13 ಸ್ಥಾನಗಳನ್ನು ತನ್ನದಾಗಿಸಿಕೊಂಡು ಜಯಭೇರಿ ಭಾರಿಸಿದ ಬಿಜೆಪಿ ಬೆಂಬಲಿತರು

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆದಿದ್ದು, ಒಟ್ಟು 13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು ಅದರಲ್ಲಿ 751 ಮತಗಳು
ಚಲಾವಣೆಯಾಗಿವೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು
376 ಮತಗಳಿದ್ದು, 313 ಮತಗಳು ಚಲಾವಣೆಯಾಗಿದೆ.


ಚುನಾವಣಾ ಫಲಿತಾಂಶ ಸಾಮಾನ್ಯ ಸಾಲಗಾರರ ಕೇತ್ರದಿಂದ ಒಟ್ಟು 6 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ನಾಗೇಶ್
ಕುಂದಲ್ಪಾಡಿ 534 ಮತಗಳನ್ನು ಜಯರಾಮ ನಿಡ್ಯಮಲೆ 402 ಮತಗಳನ್ನು, ಧನಂಜಯ ಕೋಡಿ 346 ಮತಗಳನ್ನು ಹೊನ್ನಪ್ಪ ಅಮೆಚೂರು 453 ಮತಗಳನ್ನು,ಸೀತಾರಾಮ ಕದಿಕಡ್ಕ 388 ಮತಗಳನ್ನು, ಅಶೋಕ ಪೆರುಮುಂಡ 478 ಮತಗಳನ್ನು ಪಡೆದುಕೊಂಡಿದ್ದಾರೆ.


ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಪೆರುಮುಂಡ 308 ಮತಗಳನ್ನು, ದಯಾನಂದ
ಪೆರುಮುಂಡ 310 ಮತಗಳನ್ನು, ಗೌತಮ್
ಎಂ.ಎಸ್. 170 ಮತಗಳನ್ನು, ಚಿದಾನಂದ
ಪೀಚೆ 284 ಮತಗಳನ್ನು, ಜನಾರ್ದನ ನಾಯ್ಕ
ನಿಡ್ಯಮಲೆ 168 ಮತಗಳನ್ನು, ಉಮೇಶ್
ಕುಂಬಳಚೇರಿ 210 ಮತಗಳನ್ನು, ಮತಗಳನ್ನು
ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ಪಿ.ಟಿ 461 ಮತಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಪಿ.ಪಿ. 246 ಮತಗಳನ್ನು ಪಡೆದು, ಜಯರಾಮ ಪಿ.ಟಿ. ರವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೇಷಪ್ಪ ಎನ್.ವಿ. 525 ಮತಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಧರ ನಾಯ್ಕ ಕೆ.ಸಿ. 181 ಮತಗಳನ್ನು ಪಡೆದು ಶೇಷಪ್ಪ ಎನ್.ವಿ.ರವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಸ್ಥಾನದಿಂದ ಎರಡು ಮಂದಿ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪುಷ್ಪಾವತಿ ವೈ.ಜೆ. 415 ಮತಗಳನ್ನು, ಪ್ರಮೀಳ ಎನ್. 457 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರೋಹಿಣಿ 192, ಶೀಲಾ ಎನ್ ಸಿ 316 ಮತ ಪಡೆಯುವುದರೊಂದಿಗೆ ಪುಷ್ಫಾವತಿ ಮತ್ತು ಪ್ರಮೀಳ ನಿರ್ದೇಶಕರಾಗಿ ಆಯ್ಕೆಯಾದರು.

ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರದೀಪ್ ಕೆ.ಎಂ. 537ಮತಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬೂಬಕ್ಕರ್ ಪಿ.ಎಂ.
182 ಮತಗಳನ್ನು ಪಡೆದು ಪ್ರದೀಪ್ ಕೆ.ಎಂ.
ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ದೀನರಾಜ್ ಡಿ.ಸಿ. 470
ಮತಗಳನ್ನು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಪ್ರಸಾದ್ ಪಿ.ಬಿ. 256 ಮತಗಳನ್ನು ಪಡೆದುಕೊಂಡಿದ್ದು, ದೀನರಾಜ್ ಡಿ.ಸಿ.ರವರು
ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಾಲರಹಿತ ಕ್ಷೇತ್ರದಿಂದ ಓರ್ವ ನಿರ್ದೇಶಕರ
ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ
ಅಭ್ಯರ್ಥಿಯಾಗಿ ಕಿರಣ್ ಬಿ.ಎಲ್. 190
ಮತಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ
ಅಭ್ಯರ್ಥಿ ನೇಮಿರಾಜ ಪಿ.ಎಚ್. 122
ಮತಗಳನ್ನು ಪಡೆದುಕೊಂಡು, ಕಿರಣ್ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 13 ಕ್ಕೆ 13 ಸ್ಥಾನ ಗೆಲ್ಲುವುದರೊಂದಿಗೆ ಸಹಕಾರಿ ಸಂಘದ ಅಧಿಕಾರದ ಚುಕ್ಕಾಣಿ ಬಿಜೆಪಿ ಬೆಂಬಲಿತರ ಪಾಲಾಗಿದೆ.

ರಾಜ್ಯ