ಕಡಬ: ರಬ್ಬರ್ ಕಟ್ಟಿಂಗ್ ಗೆ ಸಕಲೇಶಪುರದಿಂದ ಬಂದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ.

ಕಡಬ: ರಬ್ಬರ್ ಕಟ್ಟಿಂಗ್ ಗೆ ಸಕಲೇಶಪುರದಿಂದ ಬಂದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ.

ಕಡಬ: ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಬಂದಿದ್ದ ವ್ಯಕ್ತಿಯೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಕಲೇಶಪುರ ಬಾಲಗದ್ದೆ ನಿವಾಸಿ, ಧರ್ಮಯ್ಯ (40) ಎಂದು ಗುರುತಿಸಲಾಗಿದೆ.ಈತ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳ ಬಂದಿದ್ದರು.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಬಂದ ಪೊಲೀಸರು ಶೌರ್ಯ ಮತ್ತು ಆಪದ್ಭಾಂಧವ ತಂಡದ ಸದಸ್ಯರ ಸಹಕಾರದೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಿ ಮೃತ ದೇಹ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಶೌರ್ಯ ತಂಡದ ಮುರಳಿ, ಸೋಮಪ್ಪ, ಆನಂದ ಅಪರ್ಣ, ಆಪದ್ಭಾಂಧವ ತಂಡದ ಸದಸ್ಯರಾದ ರಫೀಕ್, ಮನೋಜ್, ಅನಿಲ್ ಸೇರಿದಂತೆ ಸ್ಥಳೀಯರು ನದಿಯಲ್ಲಿ ಮೃತ ದೇಹ ಪತ್ತೆಹಚ್ಚಲು ಸಹಕರಿಸಿದ್ದರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ರಾಜ್ಯ