ಲಾರಿ – ಬೈಕ್ ನಡುವೆ ಭೀಕರ ಅಪಘಾತ: ಎರಡು ತುಂಡಾದ ಬೈಕ್ ಸವಾರನ ದೇಹ

ಲಾರಿ – ಬೈಕ್ ನಡುವೆ ಭೀಕರ ಅಪಘಾತ: ಎರಡು ತುಂಡಾದ ಬೈಕ್ ಸವಾರನ ದೇಹ

: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಬೈಕ್ ಸವಾರನ ಮೇಲೆಯೇ ಲಾರಿ ಹರಿದ ಪರಿಣಾಮ ದೇಹ ಎರಡು ತುಂಡಾಗಿದೆ ಎಂದು ತಿಳಿದು ಬಂದಿದೆ.ಗಂಗಾಧರ ಮೃತ ದುರ್ದೈವಿ.

ಮಡಿಕೇರಿ ಸಮೀಪದ ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೈಕ್‌ಗೆ ಕೂಡಿಗೆ ಕಡೆಯಿಂದ ಕಾಫೀ ವರ್ಕ್ಸ್ ಕಡೆಗೆ ಬರುತ್ತಿದ್ದ 10 ವೀಲ್ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.ಇತ್ತ ಬೈಕ್ ಸವಾರ ಕುಶಾಲನಗರದಿಂದ ಕೆಲಸ ಮುಗಿಸಿ ರೂಮ್‌ಗೆ ತೆರಳುತ್ತಿದ್ದರು ಎನ್ನಲಾಗಿದೆ
ಬೈಕ್ ಸವಾರ ಗಂಗಾಧರ ಅವರು ಹಾಸನ ಜಿಲ್ಲೆಯ ಅರಸಿಕೆರೆ ನಿವಾಸಿ ಎಂದು ತಿಳಿದು ಬಂದಿದೆ.ಇವರು ಕುಶಾಲನಗರದಲ್ಲಿ‌ ವಿದ್ಯುತ್ ಕಂಬ ನೆಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು,ಕಳೆದ ಕೆಲವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.ಹೀಗೆ ಕೆಲಸಕ್ಕೆಂದು ಹೋದವರು ಇನ್ನೇನು ಮನೆ ತಲುವಷ್ಟರಲ್ಲಿ ಈ ದುರಂತ ಸಂಭವಿಸಿದೆ.ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಾಜ್ಯ