
ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ 3 ವರ್ಷಗಳಿಂದ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನೇಶ್ ಕೆ ರವರು ಎ ಎಸ್ ಐ ಆಗಿ ಭಡ್ತಿ ಹೊಂದಿದ್ದಾರೆ.
ಧನೇಶ್ ರವರು ಮೂಲತ ಸುಳ್ಯ ತಾಲೂಕು ಮರ್ಕಂಜ
ಗ್ರಾಮದ ದಿವಂಗತ ದಾಸಪ್ಪ ಗೌಡ ಹಾಗೂ
ಸರೋಜಿನಿಯವರ ಪುತ್ರ. ಕಳೆದ ೨೯ ವರ್ಷಗಳಿಂದ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮುಲ್ಕಿ, ಉಪ್ಪಿನಂಗಡಿ, ಕಡಬ, ಪುತ್ತೂರು, ಸುಬ್ರಹ್ಮಣ್ಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಹೆಡ್‌ಕಾನ್ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿದ್ದರು .ಈದೀಗ ಮುಂಬಡ್ತಿ ಹೊಂದಿ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಯಾಗಿದ್ದಾರೆ.

