ತಾಯಿ ಮನೆಗೆ ತೆರಳಿದ ಅಪ್ರಾಪ್ತ ಬಾಲಕಿ ಸಹಿತ ಅಕ್ಕ ತಂಗಿ ನಾಪತ್ತೆ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ತಾಯಿ ಮನೆಗೆ ತೆರಳಿದ ಅಪ್ರಾಪ್ತ ಬಾಲಕಿ ಸಹಿತ ಅಕ್ಕ ತಂಗಿ ನಾಪತ್ತೆ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


ಬಂಟ್ವಾಳ: ತಂದೆಯ ಮನೆಯಿಂದ ತಾಯಿ ಮನೆಗೆ ಎಂದು ಹೋದ ಅಪ್ರಾಪ್ತ ಬಾಲಕಿ ಸಹಿತ ಅಕ್ಕ ತಂಗಿ ಇಬ್ಬರು ಬಾಲಕಿಯರು ಕಾಣೆಯಾದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆರ್ಕಳ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಬೆರ್ಕಳ ನಿವಾಸಿ ಲವೀನಾ ಅವರ ಹೆಣ್ಮಕ್ಕಳಾದ ಕು.ಶ್ರೇಯಾ ಇವಳ ತಂಗಿ ಅಪ್ರಾಪ್ತ ಬಾಲಕಿ ಇಬ್ಬರು ಕಾಣೆಯಾದ ಯುವತಿಯರು.

ಕಾಣೆಯಾದ್ದು ಎಲ್ಲಿಂದ

ಲವೀನಾ ಅವರ ಗಂಡನ ಮನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿದೆ. ಲವೀನಾ ಅವರು ಕಳೆದ ಕೆಲ ವರ್ಷಗಳಿಂದ ದೂರವಾಗಿ ಉಳಿದಿದ್ದು, ಬೆರ್ಕಳ ಎಂಬಲ್ಲಿ ವಾಸವಾಗಿದ್ದರು.

ಜೂನ್ 7 ರಂದು ಲವೀನಾ ಅವರ ಇಬ್ಬರು ಹೆಣ್ಮಕ್ಕಳು ತಂದೆಯ ಮನೆಗೆ ಹೋಗಿಬರುವುದಾಗಿ ಹೋಗಿದ್ದರು. ಅ ಬಳಿಕ ಜೂನ್ 13 ರಂದು ತಂದೆಯ ಮನೆಯಿಂದ ತಾಯಿ ಲವೀನಾ ಅವರ ಮನೆಗೆ ಹೋಗುತ್ತೇವೆ ಎಂದು ‌ಮನೆಯಿಂದ ಹೋದವರು ಮನೆಗೆ ಹೋಗದೆ ಕಾಣೆಯಾಗಿದ್ದಾರೆ.

ಅಕ್ಕ ತಂಗಿ ಇಬ್ಬರು ಬಾಲಕಿಯರು ಕಾಣೆಯಾಗಿರುವುದು ಸಾಕಷ್ಟು ಸಂಶಯಗಳಿಗೆ ಎಡೆಮಾಡಿದೆ. ಅಪ್ರಾಪ್ತ ಬಾಲಕಿ ಸಹಿತ ಇಬ್ಬರು ಮಕ್ಕಳು ಕಾಣೆಯಾದ ಬಗ್ಗೆ ತಾಯಿ ಲವೀನಾ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಾಲಕಿಯರ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಹಲವು ಅನುಮಾನ ವ್ಯಕ್ತಪಡಿಸುತ್ತಾರೆ.

ಬಾಲಕಿಯರ ಪತ್ತೆಗಾಗಿ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ಕಾರ್ಯಪ್ರವೃತ್ತರಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ