
ಪುತ್ತೂರು: ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಆಶಾ ಕಾರ್ಯಕರ್ತೆ ಮೃತಪಟ್ಟ ಘಟನೆ ಹಿರೇಬಂಡಾಡಿ ಗ್ರಾಮದಲ್ಲಿ ನಡೆದಿದೆ


ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ ಮೃತಪಟ್ಟಿದ್ದಾರೆ. ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.
ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾಗುತ್ತಲೇ ತೀವ್ರ ರೀತಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗಿದ್ದು, ಆದ್ರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಜೂ. 21ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ ಬಾಲಕೃಷ್ಣ ಗೌಡ, 4ನೇ ತರಗತಿ ಕಲಿಯುತ್ತಿರುವ ಪುತ್ರ ಭವಿಷ್, 3ನೇ ತರಗತಿಯ ಸ್ವಸ್ತಿಕ್ ಮತ್ತು ಹಸುಗೂಸು ಗಂಡು ಮಗುವನ್ನು ಅಗಲಿದ್ದಾರೆ