
6 ಮಂದಿ ಅಮಾಯಕರು ಕೋಮು ದ್ವೇಷಕ್ಕೆ ಸಿಲುಕಿ ಹತ್ಯೆಗೊಳಗಾದ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ25 ಲಕ್ಷ ಪರಿಹಾರ ನೀಡುವುದರೊಂದಿಗೆ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವ ಭರವಸೆ ನೀಡುವ ಮೂಲಕ ರಾಜ್ಯ ಸರಕಾರ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಿದೆ, ರಾಜ್ಯ ಸರಕಾರ ಸಾಮಾಜಿಕ ನ್ಯಾಯ ದಡಿಯಲ್ಲಿ ಕೆಲಸ ಮಾಡುತ್ತಿದ್ದು,ಕೇಂದ್ರ ಸರಕಾರವೂ ಇದೇ ರೀತಿಯಲ್ಲಿ ಕೆಲಸ ಮಾಡಲಿ ಎಂದು ಕರ್ನಾಟಕ ಮುಸ್ಲಿಂ ಪರಿಷತ್‌ನ
ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್
ಹೇಳಿದ್ದಾರೆ.



ಅವರು ಜೂ 20 .ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ಧರ್ಮದವರ ಕೊಲೆಗಳೂ ಆಗಬಾರದು, ಹಿಂದು ಇರಲಿ ಮುಸ್ಲಿಂ ಇರಲಿ ಎಲ್ಲರ ಜೀವವೂ ಬೆಲೆ ಕಟ್ಟಲಾಗದ್ದು,ಇತ್ತೀಚೆಗೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗದಲ್ಲಿ ಮುಂದುವರಿಯಲೂ ಅವಕಾಶ ಕಲ್ಪಿಸಲಾಗಿದೆ.ಹಿಂದೆ ಬಿಜೆಪಿ ಸರಕಾರ ಅವರಿಗೆ ತಾತ್ಕಲಿಕ ಕೆಲಸ ಕೊಟ್ಟಿತ್ತು ಈಗಿನ ಸರಕಾರ ಅವರಿಗೆ ಪರ್ಮನೆಂಟ್
ಆಗುವಂತೆ ನೋಡಿಕೊಳ್ಳುವುದು ಎಂದು ಹೇಳಿದರು.

ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಹತ್ಯೆಗೊಳಗಾದವರಿಗೆ ಪರಿಹಾರ ನೀಡುವಂತೆ ಮನವಿ
ಮಾಡಲಾಗಿತ್ತಾದರೂ ಬಿಜೆಪಿ ಸರಕಾರ ಸಹಕಾರ
ನೀಡದಿರುವುದು ಬೇಸರದ ವಿಚಾರ. ಆಗಿದ್ದ ಮಂತ್ರಿಗಳೂ ಮೃತರ ಮನೆಗೆ ಭೇಟಿ ಕೊಟ್ಟಿಲ್ಲ ಅಧಿಕಾರಿಗಳೂ ಬಾರದಂತೆ ತಡೆದಿದ್ದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವಿಶ್ವಾಸ ವಿದೆ. ಮುಂದೆ ಈ ರೀತಿಯ ಘಟನೆ ನಡೆಯಬಾರದು. ನಡೆದರೆ ಆರೋಪಿ ಯಾವುದೇ ಧರ್ಮಕ್ಕೂ ಸೇರಿದ್ದರು ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು. ಸಿ. ಎ, ಎನ್ ಆರ್ ಸಿ ಗಲಬೆಯಲ್ಲಿ ಹತರಾದವರಿಗೂ ಪರಿಹಾರ ಸಿಗಬೇಕು.
ಅಲ್ಪಸಂಖ್ಯಾತರಿಗೆ ಇಲಾಖೆಯಿಂದ ಸಿಗುವ ಸವಲತ್ತುಗಳಿಗೆ ಬಿಜೆಪಿ ತಡೆ ಮಾಡಿತ್ತು ಮಸೀದಿ ಇರಲಿ ದೇವಸ್ಥಾನ ಇರಲಿ ಎಲ್ಲವೂ ಸರಕಾರದ ಅಧೀನದಲ್ಲಿರುವಂತದ್ದು, ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ 5000 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ಅನುದಾನ ಬಜೆಟ್‌ನಲ್ಲಿ ಇಡುವ ವಿಶ್ವಾಸವಿದೆ ಎಂದು
ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ
ಮೂಸಾಕುಂಞ ಪೈಂಬೆಚ್ಚಾಲು, ಸಿದ್ದೀಕ್ ಕೊಕ್ಕೋ,
ಆರ್.ಬಿ.ಬಶೀರ್ ಪೈಚಾರ್, ಶರೀಫ್ ಕಂಠಿ ಇದ್ದರು.