ಬೆಳ್ಳಾರೆಯ ಕಳಂಜದಲ್ಲಿ ಹತ್ಯೆಗೊಳಗಾದ ಮಸೂದ್ ಕುಟುಂಬದವರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರಿಂದ ರೂ 25ಲಕ್ಷ ಪರಿಹಾರಧನ ವಿತರಣೆ

ಬೆಳ್ಳಾರೆಯ ಕಳಂಜದಲ್ಲಿ ಹತ್ಯೆಗೊಳಗಾದ ಮಸೂದ್ ಕುಟುಂಬದವರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರಿಂದ ರೂ 25ಲಕ್ಷ ಪರಿಹಾರಧನ ವಿತರಣೆ


ಈ ಹಿಂದಿನ ಸರಕಾರದ ಅವಧಿಯಲ್ಲಿ ಕೋಮುದ್ವೇಷದಿಂದ ಹತ್ಯೆಗೊಳಗಾದವರಿಗೆ ಪರಿಹಾರ, ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ಎಲ್ಲಾ ಪ್ರಕರಣ ಗಳ ಮರು ತನಿಖೆ ತಪ್ಪಿತಸ್ಥ ರ ವಿರುದ್ಧ ಕಠಿಣ ಕ್ರಮ :ಸಿ. ಎಂ. ಸಿದ್ದರಾಮಯ್ಯ
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಕೋಮು ದ್ವೇಷದಿಂದ ಹತ್ಯೆಯಾದವರಲ್ಲಿ ಒಬ್ಬರಿಗೆ ಮಾತ್ರ ಪರಿಹಾರಧನ ನೀಡಿದೆ, ಚುನಾವಣೆ ಸಂದರ್ಭದಲ್ಲಿ ತಾರತಮ್ಯಸರಿಪಡುತ್ತೇವೆ ಎoದು ನಾವು ನೀಡಿದ ಮಾತಿಗೆ ಬದ್ಧರಾಗಿ ಇಂದು ಸುಳ್ಯದ ಬೆಳ್ಳಾರೆ ಕಳಂಜದ ಮಸೂದ್, ಮಂಗಳಪೇಟೆ ಯ ಫಾಝಿಲ್, ಕೃಷ್ಣಾಪುರದ ಜಲೀಲ್,ಕಾಟಿಪ್ಪಳ್ಳದ ದೀಪಕ್ ರಾವ್ ಕುಟುಂಬಕ್ಕೆ ತಲಾ ರೂ 25 ಲಕ್ಷ ಪರಿಹಾರಧನ ವಿತರಿಸಿ ಮುಖ್ಯಮಂತ್ರಿ ಯವರು ಮಾತನಾಡುತ್ತಿದ್ದರು ಮುಂದೆ ರಾಜ್ಯದಲ್ಲಿ ಕೋಮುಗಲಭೆಗೆ ಅವಕಾಶ ವೆ ಇಲ್ಲ ಎಂದರು
ಜುಲೈ 19 2022 ರಂದು ಬೆಳ್ಳಾರೆಯ ಕಳಂಜ ಎಂಬಲ್ಲಿ ಮಸೂದ್ ಎಂಬಲ್ಲಿ ಹತ್ಯೆಗೀಡಾಗಿದ್ದರು
ಮಸೂದ್ ಕುಟುಂಬಕ್ಕೆ
ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾ ದಲ್ಲಿ
ರೂ 25 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಿದರು
ಈ ಸಂದರ್ಭದಲ್ಲಿ ಸಚಿವರು ಗಳಾದ ಝಮೀರ್ ಅಹ್ಮದ್, ಶಾಸಕರುಗಳಾದ ಅಶೋಕ್ ರೈ, ತನ್ವಿರ್ ಸೇಠ್, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಮಾಜಿ ಶಾಸಕ ಐವನ್ ಡಿ ‘ಸೋಜಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡಪoಗಾಯ,
ಸುಳ್ಯ ವಿಧಾನಸಭಾ ಕ್ಷೇತ್ರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪಿಸಿ ಜಯರಾಮ್
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಾಪ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,
ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ
ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಕಾಯರ್ತೋಡಿ ದೇವಸ್ಥಾನದ ಮಾಜಿ ಟ್ರಸ್ಟಿ ಜಗದೀಶ್ ಪಡಪು,ಶ್ರೀ ಕುಕ್ಕೆ ಸುಬ್ರಹ್ಮಣ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕೂಜುಗೋಡು,

ಮಸೂದ್ ತಾಯಿ ಸಾರಮ್ಮ. ಪತಿ ಅಬ್ದುಲ್ ಖಾದರ್,ಸಹೋದರ ಸಂಬಂಧಿ ಹೈದರ್ ಕಳಂಜ
ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ