ಕ್ಷುಲಕ ಕಾರಣಕ್ಕೆ ಲಾರಿ ಚಾಲಕನಿಗೆ ಹಲ್ಲೆ: ಪ್ರಕರಣ ದಾಖಲು.

ಪುತ್ತೂರು: ಚಲಿಸುತ್ತಿದ್ದ ಲಾರಿಗೆ ಅಡ್ಡ ಬಂದಿರುವುದಕ್ಕೆ ಚಾಲಕ ‘ಥೂ’ ಎಂದದಕ್ಕೆ ವ್ಯಕ್ತಿಗಳಿಬ್ಬರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ನಡೆದ ಬಗ್ಗೆ ವರದಿ ಯಾಗಿದೆ.ಬೆಳ್ತಂಗಡಿಯ ಮಾಲತಿ ಸಂಜೀವ ಪೂಜಾರಿ ಮಾಲಕತ್ವದ ಲಾರಿ ಚಾಲಕ ಅಬ್ದುಲ್ ಹಮೀದ್ (52ವ)ರವರು ಹಲ್ಲೆಗೊಳಗಾದವರು. ಅವರು ಭಾರತ್ ಗ್ಯಾಸ್ ಸಿಲಿಂಡರ್‌ಗಳನ್ನು ಲಾರಿಯಲ್ಲಿ ಹೇರಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ ಮುಕ್ರಂಪಾಡಿಯಲ್ಲಿ ಜೀಪೊಂದರ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಒಮ್ಮೆಲೆ ರಸ್ತೆಗೆ ಅಡ್ಡ ಬಂದಾಗ ಲಾರಿ ಚಾಲಕ ಅಬ್ದುಲ್ ಹಮೀದ್ ‘ಥೂ) ಎಂದಿದ್ದಾರೆ. ಇದನ್ನು ಗಮನಿಸಿದ ಜೀಪು ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಲಾರಿಯನ್ನು ತಡೆದು ನಿಲ್ಲಿಸಿ ಚಾಲಕ ಅಬ್ದುಲ್ ಹಮೀದ್ ಅವರನ್ನು ಪ್ರಶ್ನಿಸಿ
ನ್ಯೂ ಡ್ರೈವರ್‌ನಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು
ಆರೋಪಿಗಳಿಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ