
ಸುಳ್ಯದ ರಥ ಬೀದಿಯ ಬಸ್ಸುತಂಗುದಾಣದಲ್ಲಿ ಕುಡಕರದ್ದೇ ಹವಾ ..ಹಗಲಿಡೀ ಮಲಗಿ ನಿದ್ರಿಸುತ್ತಿರುವ ಅಪರಿಚಿತ ವ್ಯಕ್ತಿಗಳಿಂದಾಗಿ ನಿಜವಾದ ಪ್ರಯಾಣಿಕರಿಗೆ ಬಸ್ ತಂಗುದಾಣದಲ್ಲಿ ಬಳಸಿ ಕೊಳ್ಳುವ ಅವಕಾಶ ಇಲ್ಲವಾಗಿದೆ, ಸುಳ್ಯ ರೋಟರಿ ಶಾಲೆ ಬಳಿಯಲ್ಲಿ ಇನ್ಹರ್ ವ್ಹೀಲ್ ಕ್ಲಬ್ ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯು ಅಜ್ಜಾವರ ಮಂಡೆಕೋಲು ಬಾಗದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಸ್ ತಂಗುದಾಣ ನಿರ್ಮಿಸಿ ಲೋಕಾರ್ಪಣೆ ಮಾಡಿತ್ತು ಆದರೆ ಅಜ್ಜಾವರ. ಮಂಡೆಕೋಲು ಭಾಗಕ್ಕೆ ಸಂಚರಿಸುವ ಸರಕಾರಿ ಬಸ್ ಆಗಲಿ ಖಾಸಾಗಿ ಬಸ್ ಆಗಲಿ ,ಅಥವಾ ಇತರೆ ವಾಹನಗಳು ಇಲ್ಲಿ ವಾಹನವನ್ನು ನಿಲ್ಲಿಸದೆ ಎಸ್ ಬಿ ಐ ಎ ಟಿಎಂ ಮುಂಭಾಗದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದು ಇದರಿಂದ ಈ ಭಾಗದಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿರುತ್ತದೆ ಆದರೂ ಇವರಾರು ತಮಗೆ ಅನುಕೂಲ ವಿರುವ ಬಸ್ ತಂಗುದಾಣವನ್ನು ಉಪಯೋಗಿಸದೇ ಇರುವುದರಿಂದ ಅಪರಿಚಿತ ಕುಡುಕರ ಪಾಲಿನ ಬಿಟ್ಟಿ ತಂಗುದಾಣವಾಗಿ ಮಾರ್ಪಟ್ಟಿದೆ.



ಸುಳ್ಯದ ಪ್ರಮುಖ ಭೀದಿ ರಥ ಭೀದಿ, ಆದರೂ ಇಲ್ಲಿರುವ ಈ ತಂಗುದಾಣ ಸ್ವಚ್ಚತೆ ಕಾಣದ ಸ್ಥಳವಾಗಿದೆ, ದಿನವಿಡೀ ಮೂರು ನಾಲ್ಕು ಮಂದಿ ಅಪರಿಚಿತ ವ್ಯಕ್ತಿಗಳು ಕುಡಿದು ಬೆಚ್ಚನೆ ನಿದ್ರಿಸುವುದರಿಂದ ಪ್ರಯಾಣಿಕರು ಸಾರ್ವಜನಿಕರು ಮುಂದಾಗಬಹುದಾದ ಅನಾಹುತಗಳನ್ನು ನೆನೆದು, ರಸ್ತೆಯಂಚಿನಲ್ಲಿದ್ದರೂ ಇದರ ಬಳಿ ಸುಳಿಯಲು ಹಿಂದೇಟು ಹಾಕುತ್ತಿದ್ದು,
ನಗರ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿ ವರ್ಗ ಇದರಕಡೆ ಗಮನ ಹರಿಸಿ ಅಜ್ಜಾವರ ಮಂಡೆಕೋಲು ತೆರಳುವ ಬಸ್ಸು ಇಲ್ಲೇ ಪ್ರಯಾಣಿಕರನ್ನು ಹತ್ತಿಸಿ ಕರೆದೊಯ್ಯುವಂತೆ ಮಾಡಿದಲ್ಲಿ ಪ್ರಯಾಣಿಕರಿಗೂ ಅನುಕೂಲವಾಗಿ, ಟ್ರಾಫಿಕ್ ಜಾಮ್ ಕಡಿಮೆಯಾಗಿ, ಕುಡುಕರ ಹಾವಳಿಯೂ ತಪ್ಪಬಹುದು ಜೊತೆಗೆ ಸ್ಥಳವೂ ಸ್ವಚ್ಚತೆಯಾಗಬಹುದು ಎಂಬುದು ಸಾರ್ವಜನಿಕರ ಆಶಯ.
