ಧಿಡೀರ್‌ ಅಸ್ವಸ್ಥಗೊಂಡ ಎಂಬಿಎ ವಿದ್ಯಾರ್ಥಿ ಬೆಳ್ಳಾರೆಯ ಶರತ್ ಜೋಶಿ ಸಾವು..

ಧಿಡೀರ್‌ ಅಸ್ವಸ್ಥಗೊಂಡ ಎಂಬಿಎ ವಿದ್ಯಾರ್ಥಿ ಬೆಳ್ಳಾರೆಯ ಶರತ್ ಜೋಶಿ ಸಾವು..

ಪುತ್ತೂರು: ಎಂಬಿಎ ವಿದ್ಯಾರ್ಥಿಯೋರ್ವ ದಿಢೀರ್‌ ಅಸ್ವಸ್ಥಗೊಂಡು ಮೃತಪತ್ತಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.

ಬೆಳ್ಳಾರೆಯ ಉದ್ಯಮಿ, ಪ್ರಸಾದ್‌ ಹಾರ್ಡ್‌ವೇರ್ಸ್‌ನ ಮಾಲಕ ಸುಬ್ರಹ್ಮಣ್ಯ ಜೋಶಿಯವರ ಪುತ್ರ ಶರತ್‌ ಜೋಶಿ ಮೃತ ಯುವಕ.

ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಶರತ್‌ ಜೋಷಿ ಅವರು ಪರೀಕ್ಷೆ ಬರೆದು ನಿನ್ನೆ ಮನೆಗೆ ಬಂದಿದ್ದರು. ಆದರೆ ರಾತ್ರಿ ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ದಿಢೀರ್‌ ಹೃದಯಾಘಾತಕ್ಕೆ ಒಳಗಾಗಿ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಮೃತರು ತಂದೆ, ತಾಯಿ ಸಹೋದರಿ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ರಾಜ್ಯ