
ಸುಳ್ಯ ತಾಲೋಕಿನ ಮರ್ಕಂಜ ಗ್ರಾಮದ ಅರಮನೆ ಗಾಯದಲ್ಲಿ ಸಂಪರ್ಕಿಸುವ ರಸ್ಥೆಗೆ ಅಡ್ಡಲಾಗಿ ಹೊಳೆಯೊಂದು ಹರಿದು ಹೊಗುತ್ತಿದ್ದು, ನಡೆದು ಹೋಗುವ ವಿದ್ಯಾರ್ಥಿಗಳು ಹಾಗೂ ಸ್ಥಳಿಯ ನಿವಾಸಿಗ ಜೀವ ಕೈಯಲ್ಲಿ ಹಿಡಿದು ಮರದ ಪಾಲದ ಮೂಲಕ ಈ ಹೊಳೆದಾಟುವ ಅನಿವಾರ್ಯತೆ ಇದ್ದು , ಈ ಭಾಗದ ಮೂಲ ನಿವಾಸಿಗಳ ಒತ್ತಾಯದಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಹಿಂದೆ ಶಾಸಕ , ಸಚಿವರಿಗೆ ಮನವಿ ನೀಡಿತ್ತು ; ಆದರೆ ಯಾವುದೇ ಫಲಶೃತಿ ಸಿಗದೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ತಾಹಶೀಲ್ದಾರ್ ಮಖಾಂತರ ಸಂಭಂದ ಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು, ಇದೀಗ ಮತ್ತೆ ಮಳೆಗಾಲ ಹತ್ತಿರ ವಾಗುತಿದ್ದು, ಅಡ್ತಲೆ ವಿವಿಧ ಕಾಮಗಾರಿಯನ್ನು ಉದ್ಘಾಟಿಸಲು ಬಂದ ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ಮತ್ತೆ ಅಂಬೇಡ್ಕರ್ ಸಮಿತಿ ಜಿಲ್ಲಾದ್ಯಕ್ಷ ನೇತ್ರತ್ವದಲ್ಲಿ ಮನವಿ ನೀಡಿದ್ದು ಶಾಸಕಿ ಆದ್ಯತೆಯ ನೆಲ್ಲೆಯಲ್ಲಿ ಬಂದ ಆರಂಭದ ಅನುದಾನದಲ್ಲಿ ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.


