
ಸುಳ್ಯ ತಾಲೂಕು ಅರಂತೋಡು ಗ್ರಾಮದ ಅಡ್ತಲೆ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮಾಸಿಕ ಸಭೆ ಜೂನ್ ೪ ರಂದು ನಡೆಯಿತು, ಕಾರ್ಯಕ್ರಮವನ್ನು ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷರವರು ಉದ್ಘಾಟನೆ ಮಾಡಿದರು , ಸಭೆಯಲ್ಲಿ 20. ಬಡ ಮಕ್ಕಳಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು ಮುಖ್ಯ ಅತಿಥಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ಕೊಡಗು ಜಿಲ್ಲಾಧ್ಯಕ್ಷರಾದ ಉನೈಸ್ ಪೆರಾಜೆ ಸಂಘಟನೆಯ ಕುರಿತು ಮಾತನಾಡಿದರು.


ಸಭೆಯಲ್ಲಿ 40 ವರ್ಷಗಳಿಂದ ಅರಮನೆ ಗಾಯ ಎಂಬಲ್ಲಿ ಸೇತುವೆ ಇಲ್ಲದೆ ನಮಗೊಂದು ಸೇತುವೆ ನಿರ್ಮಿಸಿ ಕೊಡುವಂತೆ ನೂತನ ಶಾಸಕರಾದ ಭಾಗೀರಥಿ ಮುರುಳ್ಯ ಮನವಿ ನೀಡಲು ನಿರ್ಧರಿಸಲಾಯಿತು. ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷರು ರಮೇಶ್ ಕೊಡೆಂಕಿರಿ ಕಾರ್ಯದರ್ಶಿ ತೇಜಕುಮಾರ್ ಅರಂತೋಡು ಘಟಕದ ಅಧ್ಯಕ್ಷರು ನವೀನ್ ಕಲ್ಲುಗುಡ್ಡೆ ಕಾರ್ಯದರ್ಶಿ ರಾಧಾಕೃಷ್ಣ ಅರಮನೆ ಗಾಯ ಮಹಿಳಾ ಅಧ್ಯಕ್ಷರು ಯಶೋದ ಅರಮನೆ ಗಾಯ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



