

ಸಾಮಾನ್ಯ ಕಾರ್ಯಕರ್ತನ ಭಾವನೆಗೂ ಸಮಾಜದಲ್ಲಿ ಗೌರವ ಸಿಗುವಂತಾಗಬೇಕು,ರಾಷ್ಟ್ರೀಯ ವಿಚಾರದಾರೆಗೆ ಕೆಲಸ ಮಾಡುವ ಕಾರ್ಯಕರ್ತರಿಗೆ ರಕ್ಷಣೆ ಸಿಗುವುದರ ಜೊತೆ ತಾಯಿ ಭಾರತಾಂಭೆಗೆ ವಿಶ್ವ ಗೌರವ ಸಿಗುವಂತಾಗಬೇಕು ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಅವರು ಅಡ್ಕಾರು ಶ್ರೀ ಸಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಜೂನ್ 4 ರಂದು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಧಾರ್ಮಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.ಅದಿಕಾರಕ್ಕೋಸ್ಕರ ಸಿದ್ದಾಂತಗಳನ್ನು ಬಿಟ್ಟ ಕೆಲವೊಂದು ವ್ಯಕ್ತಿಗಳಿಂದ ಕಾರ್ಯಕರ್ತರಿಗೆ ಸೋಲಾಯಿತು, ಹಿಂದುತ್ವ ಪ್ರತಿಪಾದನೆಗಾಗಿ ,ಹಿಂದೂ ಕಾರ್ಯಕರ್ತರು ತಲೆ ಎತ್ತಿ ನಿಲ್ಲುವಂತಾಗಲು ಚುನಾವಣೆಗೆ ಸ್ಪರ್ಧೆ ಮಾಡಬೇಕಾಗಿ ಬಂತು,ಈಗ ಹಿಂದು ಸಮಾಜ ಸವಾಲಿನ ನಡುವೆ ನಡೆದು ಬರಬೇಕಿದೆ, ಎಲ್ಲಾ ಸಂದರ್ಭದಲ್ಲಿ ಸುಳ್ಯದ ಹಿಂದೂ ಕಾರ್ಯಕರ್ತರು ಶಕ್ತಿ ತುಂಬಿದ್ದಾರೆ, ರಾತ್ರಿ ಹಗಲೆನ್ನದೆ ದುಡಿದ್ದಿದ್ದಾರೆ , ನಿಮ್ಮ ಈ ಹಿಂದೂ ಕಾರ್ಯಕರ್ತನಿಗಾಗಿ ಸಕಲವನ್ನು ತ್ಯಾಗ ಮಾಡುವ ಹಿಂದೂ ಸಮಾಜದ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ಹೇಳಿದ ಅವರು ಹಿಂದೂ ಸಮಾಜವನ್ನು ಒಡೆಯತಕ್ಕ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಮಾಜವನ್ನು ಒಂದು ಗೂಡಿಸಲು ಸಾದ್ಯ ಎಂದು ಹೇಳಿದರು.


ಸಭೆಯ ಆರಂಬಕ್ಕೂ ಮೊದಲು ಅರುಣ್ ಕುಮಾರ್ ಪುತ್ತಿಲರನ್ನು ಜಾಲ್ಸೂರಿನಲ್ಲಿ ಪುಷ್ಪಗುಚ್ಚ , ಶಾಲು ಹೊದೆಸಿ ಸ್ವಾಗತಿಸಲಾಯಿತು, ಬಳಿಕ ಅವರ ಅಭಿಮಾನಿ ಬಳಗದಿಂದ ಬೃಹತ್ ಮೆರವಣಿಗೆಯೊಂದಿಗೆ ಸಭಾ ವೇದಿಕೆ ವರೆಗೆ ಕರೆತರಲಾಯಿತು. ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಬೋರ್ಕರ್ ಭಗವಾನ್ ಕನ್ಸ್ಟ್ರಕ್ಷನ್ ಸುಳ್ಯ ವಹಿಸಿದ್ದರು, ಮುಖ್ಯ ಅತಿಥಿಳಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ ಮಾತನಾಡಿ ಅರುಣ್ ಕುಮಾರ್ ಪುತ್ತಿಲ ರಾಜಕೀಯಕ್ಕೆ ಸೀಮಿತವಾಗಿಲ್ಲ ಅವರು ಹಿಂದುತ್ವದ ಶಕ್ತಿ, ರಾಜಕೀಯದವರು ಚಲ ಬಿಡದಿದ್ದರೆ ಗ್ರಾಮದಲ್ಲಿ ನೂರಾರು ಅರುಣ್ ಪುತ್ತಿಲ ಹುಟ್ಟಿ ಬರಬಹುದು ಆ ಸಂದರ್ಭದಲ್ಲಿ ಯಾವ ಪಕ್ಷವೂ ಗೆಲ್ಲಲು ಸಾಧ್ಯವಿಲ್ಲ,ಎಂದು ರಾಜ್ಯ ಬಿಜೆಪಿಯ ನಿಲುವಿನ ವಿರುದ್ದ ಪರೋಕ್ಷವಾಗಿ ಅಸಮದಾನ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಬೆಂಬಲವಾಗಿ ಸದಾ ನಿಲ್ಲುವುದಾಗಿ ಘೋಷಿಸಿದರು.

ವೇದಿಕೆಯಲ್ಲಿ ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ , ಹರೀಶ್ ರಾವ್ ಗಬ್ಬಲಡ್ಕ ವೇದಿಕೆಯಲ್ಲಿದ್ದರು ದಿನೇಶ್ ಅಡ್ಕಾರು ಸ್ವಾಗತಿಸಿ ರವಿ ಪದವು ವಂದಿಸಿದರು, ವಿ.ಜೆ ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.

