ಕಲ್ಲುಗುಂಡಿ ಆರ್. ಎಂ. ಎಸ್. ಎ. ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಬೊತ್ಸವ.

ಕಲ್ಲುಗುಂಡಿ ಆರ್. ಎಂ. ಎಸ್. ಎ. ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಬೊತ್ಸವ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ ಆರ್. ಎಂ. ಎಸ್. ಎ. ಪ್ರೌಢಶಾಲೆ ಕಲ್ಲುಗುಂಡಿ ಇದರ ಶಾಲಾ ಪ್ರಾರಂಬೊತ್ಸವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ.ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮಾಜಿ ಅಧ್ಯಕ್ಷರು ಆದ ಸುಂದರಿ ಮುಂಡಡ್ಕ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಸರಕಾರ ಸರಕಾರಿ ಶಾಲೆಗೆ ಬೇಕಾದ ಸಮವಸ್ತ್ರ, ಬಿಸಿಯೂಟ, ಶೂ, ಪುಸ್ತಕ ಎಲ್ಲಾ ವ್ಯವಸ್ಥೆ ಮಾಡುವ ಮೂಲಕ ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತದೆ ಮಕ್ಕಳು ಉತ್ತಮ ಫಲಿತಾಂಶ ನೀಡುವ ಮೂಲಕ ಪೋಷಕರು ಆಗು ಅಧ್ಯಾಪಕರಿಗೆ ಒಳ್ಳೆಯ ಹೆಸರು ತರಲು ಪ್ರಯತ್ನ ಮಾಡಬೇಕು. ಎಂದರು. ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಪ್ರೌಢ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ,ಹಿರಿಯ ಪ್ರಾಥಮಿಕ ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಮಹಮದ್ ಹನೀಫ್ ಚಟ್ಟೆಕಲ್ಲು ಉಪಸ್ಥಿತರಿದ್ದರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು. ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಅತಿಥಿಗಳು ಗುಲಾಬಿ ಹೂವು ಹಾಗೂ ಸಿಹಿ ಹಂಚಿ ಸ್ವಾಗತಿಸಿದರು.

ರಾಜ್ಯ