ಸುಳ್ಯ: ಕೆ ಎಸ್ ಆರ್ ಟಿ ಸಿ ಬಸ್ ಗೆ ಹಿಂದಿನಿಂದ ಗುದ್ದಿದ ಲಾರಿ: ಸ್ಥಳದಿಂದ ಪರಾರಿಯಾದ ಲಾರಿ ಚಾಲಕ.

ಸುಳ್ಯ: ಕೆ ಎಸ್ ಆರ್ ಟಿ ಸಿ ಬಸ್ ಗೆ ಹಿಂದಿನಿಂದ ಗುದ್ದಿದ ಲಾರಿ: ಸ್ಥಳದಿಂದ ಪರಾರಿಯಾದ ಲಾರಿ ಚಾಲಕ.

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ಸಮೀಪದ ಪರಿವಾರಕಾನದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ಪ್ರಯಾಣಿಕ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ,ಘಟನೆಯ ಬಳಿಕ ಲಾರಿ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರ ನೆರವಿನಿಂದ ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು ಇದೀಗ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುಳ್ಯದಿಂದ ಕೊಯನಾಡಿಗೆ ತೆರಳುತ್ತಿದ್ದ ಬಸ್ ಗೆ ಅದರ ಹಿಂಬಾಗದಿಂದ ವೇಗವಾಗಿ ಬಂದ ಲಾರಿ (KA 51 AH 9126) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ ನ ಹಿಂಭಾಗ ಜಖಂಗೊಂಡಿದ್ದು, ಲಾರಿ ಚಾಲಕ ಹೆದರಿ ಪರಾರಿಯಾಗಿದ್ದಾನೆ. ಸುಳ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಸ್ಸಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.

ರಾಜ್ಯ