

ಅಕಾಲಿಕವಾಗಿ ನಿಧನರಾದ ಬಿಜೆಪಿ ನಾಯಕ ನವೀನ್ ರೈ ಮೇನಾಲರಿಗೆ ಬಿಜೆಪಿ ಮಂಡಲ ಸಮಿತಿ ವತಿಯಿಂದ
ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವನ್ನು ಬಿಜೆಪಿ ಕಚೇರಿಯಲ್ಲಿ ಮೇ.22 ರ ಸೋಮವಾರ ನಡೆಸಲಾಯಿತು. ನೂರಾರು ಮಂದಿ ಪಕ್ಷದ ಪ್ರಮುಖರು ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ನಾಯಕನಿಗೆ ನುಡಿನಮನ ಸಲ್ಲಿಸಿದರು.
ಅಜ್ಜಾವರದ ಜಿ.ಜಿ.ನಾಯಕ್ ರವರು
ಮೇನಾಲದಲ್ಲಿ ಹಿಂದುಗಳ ಪರವಾಗಿ ಧೈರ್ಯವಾಗಿ
ನಿಂತವರು ನವೀನ್ ರೈ. ಸಂಘಟನೆಯಲ್ಲಿ ದುಡಿಯುತ್ತಿದ್ದ ವ್ಯಕ್ತಿಯ ಅಗಲುವಿಕೆ ಸಂಘಟನೆಗೆ ದೊಡ್ಡ ನಷ್ಟ ತಂದಿದೆ,ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಹೇಳಿದರು
ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮರು ಮಾತನಾಡಿ ದೈವ ಭಕ್ತರಾಗಿದ್ದ ನವೀನ್ ರೈ, ಪಕ್ಷದ ಬೆಳವಣಿಗೆಯಲ್ಲಿ ಅವಿರತವಾಗಿ ದುಡಿದ ನವೀನ್ ರೈ ಅಗಲುವಿಕೆ ಎಲ್ಲರಲ್ಲಿ ಕಣ್ಣೀರು ತಂದಿದೆ ಎಂದರು.
ಎಸ್.ಎನ್.ಮನ್ಮಥ ಮಾತನಾಡಿ ನಂಬಿಕಸ್ಥ
ರಾಜಕಾರಣಿ ನವೀನ್ ರೈ, ಹಿರಿಯರನ್ನು ಗೌರವಿಸುವ ಗುಣ ನವೀನ್ ರೈ ಅವರದಾಗಿತ್ತು ಎಂದರು.
ಎನ್ನೆಂಸಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಯಶೋದ
ರಾಮಚಂದ್ರ ಮಾತನಾಡಿ ನವೀನ್ ರೈ ದೊಡ್ಡ ಮಟ್ಟಕ್ಕೆ
ಬೆಳೆದವರು. ವಿದ್ಯಾರ್ಥಿಯಾಗಿದ್ದಾಗ ಇದ್ದ ವಿನಯ, ದೊಡ್ಡವರಾದ ನಂತರವೂ ಹಾಗೆ ಇತ್ತು, ಬದುಕುವಮುಖ್ಯವಲ್ಲ ಬದುಕುವ ರೀತಿ ಮುಖ್ಯವೆನ್ನುವುದಕ್ಕೆ ನವೀನ್ ರೈ ಉದಾಹರಣೆಯಾಗಿದ್ದರು, ನವೀನರ ಕುಟುಂಬಕ್ಕೆ ಕಾರ್ಯಕರ್ತರು ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿಯಾಗಬೇಕು ಎಂದು ಹೇಳಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕಣೆಮರಡ್ಕ ಮಾತನಾಡಿ ನವೀನ್ ರೈ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮವನ್ನು ಒಂದಾಗಿಸುವ ಕೊಂಡಿಯಾಗಿದ್ದರು, ಪ್ರತಿ ಜೀವ ಚರದಲ್ಲಿ ದೇವರನ್ನು ಕಾಣುತ್ತಿದ್ದ ನವೀನ್ ರೈ ಬದುಕು ಆದರ್ಶವಾಗಿತ್ತು ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ ನವೀನ್ ರೈಯವರಿಗೆ ಅವರೇ ಸಾಟಿ. ಪಕ್ಷದೊಳಗೆ ನ್ಯೂನ್ಯತೆ ಇದ್ದರೆ ಅದನ್ನು ಸರಿಪಡಿಸಿ ಎಲ್ಲರೂ ಒಟ್ಟಾಗಿ ಹೋಗಬೇಕೆಂದು
ಒತ್ತಾಯಿಸುತ್ತಿದ್ದ ವ್ಯಕ್ತಿ ಎಂದು ಹೇಳಿದರು.
ಪಿ.ಕೆ.ಉಮೇಶ್ ಮಾತನಾಡಿ ಸಮಾಜಕ್ಕೆ ತೊಡಗಿಸಿಕೊಂಡ ವ್ಯಕ್ತಿ ನವೀನ್ ರೈ ಎಂದು ಹೇಳಿದರು.
ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಪುಲಸ್ಯ ರೈ ಮಾತನಾಡಿ ಬದುಕಿದ್ದಷ್ಟು ದಿನ ಸಮಾಜಕ್ಕೆ ಸಮರ್ಪಿತವಾದ ವ್ಯಕ್ತಿ ನವೀನ್
ರೈ ಎಂದು ಹೇಳಿದರು.ಎ.ಟಿ.ಕುಸುಮಾಧರ್ ಮಾತನಾಡಿ ಸ್ವಾಭಿಮಾನಿಯಾಗಿ ಬದುಕಿ ತೋರಿಸಿ ಕೊಟ್ಟವರು ನವೀನ್ ರೈ ಅವರು ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ
ಮಾತನಾಡಿ ಪಕ್ಷದಿಂದ ಕೊಟ್ಟ ಸೂಚನೆಯನ್ನು ಶಿಸ್ತಿನಿಂದ ಮಾಡುತ್ತಿದ್ದ ವ್ಯಕ್ತಿ ಅವರು ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಇರಿಸಿದವರು. ಬಡವ ಬಲ್ಲಿದ ಎನ್ನದೆ
ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಅವರಾಗಿದ್ದರು ಎಂದು ಹೇಳಿದರು ಸುಭೋದ್ ಶೆಟ್ಟಿ ಮೇನಾಲರು ಕುಟುಂಬದ ಪರವಾಗಿ ಸಭೆಗೆ ಆಗಮಿಸಿದವರನ್ನು ವೈಕುಂಠ ಸಮಾರಾಧನಾ ಕಾರ್ಯಕ್ರಮ ಆಮಂತ್ರಣ ನೀಡಿದರು.



