ಯತ್ನಾಳ ಭೇಟಿ, ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ: ಬಸವರಾಜ್ ಪಾಟೀಲ್ ಯತ್ನಾಳ್ ಎದುರಲ್ಲೇ ಬಿಜೆಪಿ ಮುಖಂಡರಿಗೆ ಅವಮಾನ.

ಯತ್ನಾಳ ಭೇಟಿ, ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ: ಬಸವರಾಜ್ ಪಾಟೀಲ್ ಯತ್ನಾಳ್ ಎದುರಲ್ಲೇ ಬಿಜೆಪಿ ಮುಖಂಡರಿಗೆ ಅವಮಾನ.

ಪುತ್ತೂರು, ಮೇ 19: ಬ್ಯಾನರ್ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ್ ದೌರ್ಜನ್ಯ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಭೇಟಿ ನೀಡಿದ್ದಾರೆ.

ಯತ್ನಾಳ ಭೇಟಿ ಸಂದರ್ಭದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಹಿಂದೂಪರ ,ಬಿಜೆಪಿ ಕಾರ್ಯಕರ್ತರನ್ನ ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಕಾರ್ಯಕರ್ತರು ತಳ್ಳಿದ ಘಟನೆ ನಡೆದಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಎದುರಲ್ಲೇ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಅವಮಾನ ಮಾಡಲಾಗಿದ್ದು, ಆಸ್ಪತ್ರೆಯ ಒಳಗೆ ಹೋಗದಂತೆ ಬಿಜೆಪಿ ಕಾರ್ಯಕರ್ತರನ್ನ ದೂರ ಇರುವಂತೆ ಪುತ್ತಿಲ ಕಾರ್ಯಕರ್ತರು ತಳ್ಳಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನ ಬಿಜೆಪಿ ಕಾರ್ಯಕರ್ತರು ನೋಡಬೇಡಿ ಎಂದು ತಳ್ಳಿದ ಪುತ್ತಿಲ ಕಾರ್ಯಕರ್ತರು ತಳ್ಳಿದ್ದು, ಪುತ್ತಿಲ ಟೀಂ ಬಸರಾಜ್ ಪಾಟೀಲ್ ಯತ್ನಲ್ ಗೆ ಮಾತ್ರ ಹಿಂದೂ ಕಾರ್ಯಕರ್ತರನ್ನು ನೋಡಲು ಎಂಟ್ರಿ ನೀಡಿದೆ.

ಇದೀಗ ಪುತ್ತಿಲ ಟೀಂ ವಿರುದ್ಧ ಬಿಜೆಪಿ ಕಾರ್ಯಕರ್ತರು ಗರಂ ಆಗಿದ್ದು, ಮತ್ತೆ ಪುತ್ತಿಲ, ಬಿಜೆಪಿ ನಾಯಕರ ನಡುವೆ ಘರ್ಷಣೆಗೆ ಬ್ಯಾನರ್ ಪ್ರಕರಣ ಕಾರಣವಾಗಿದೆ.

ರಾಜ್ಯ